ಬೆಂಗಳೂರು,ಜನವರಿ,7,2025 (www.justkannada.in): ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಏರ್ಪಡಿಸಿದ್ದ ಔತಣಕೂಟದ ಬಗ್ಗೆ ಭಾರಿ ಸುದ್ದಿಯಾಗಿತ್ತು. ಈ ಬೆನ್ನಲ್ಲೆ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಔತಣ ಕೂಟ ಆಯೋಜನೆ ಮಾಡಿದ್ದಾರೆ.
ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಡಿನ್ನರ್ ಪಾರ್ಟಿ ಆಯೋಜಿಸಿದ್ದು ಈ ಕುರಿತು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಹಿಂದೆ ನಡೆದ ಡಿನ್ನರ್ ಪಾರ್ಟಿಯಲ್ಲಿ ಸಿಎಂ ಕೂಡ ಬಂದು ಊಟ ಮಾಡಿದ್ದರು. ಡಿನ್ನರ್ ಪಾರ್ಟಿ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾಳೆಯೂ ಪಕ್ಷದ ಶಾಸಕರು ಮಾಜಿ ಶಾಸಕರ ಜೊತೆ ಡಿನ್ನರ್ ಪಾರ್ಟಿ ಅಯೋಜಿಸಲಾಗಿದೆ. ಎಸ್ ಸಿ ಎಸ್ ಟಿ ಸಮುದಾಯ ಸಮಾವೇಶ ನಡೆಸುವ ಉದ್ದೇಶವಿದೆ. ನಾಳೆ ಸಂಜೆ 7 ಗಂಟೆಗೆ ಎಸ್ ಸಿ, ಎಸ್ ಟಿ ಸಮಾವೇಶದ ಪೂರ್ವಭಾವಿ ಸಭೆ ಇದೆ. ಪೂರ್ವಭಾವಿ ಸಭೆ ಬಳಿಕ ಡಿನ್ನರ್ ಪಾರ್ಟಿ ನಡೆಯಲಿದೆ ಎಂದರು.
ಹಿಂದೆ ಚಿತ್ರದುರ್ಗದಲ್ಲಿ ಎಸ್ ಸಿ ಎಸ್ ಟಿ ಸಮಾವೇಶ ಮಾಡಿದ್ದವು. ಈಗ ಮತ್ತೆ ಸಮಾವೇಶ ನಡೆಸಿ ಧನ್ಯವಾದ ಹೇಳುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
Key words: dinner parties, Home Minister, Dr. G. Parameshwar