ಬೆಂಗಳೂರು,ಜನವರಿ,29,2025 (www.justkannada.in): ಸಾಲ ವಸೂಲಿಗಿಳಿದು ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಗಳ ವಿರುದ್ದ ಸುಮೊಟೋ ಕೇಸ್ ದಾಖಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರಿವಾಜ್ಞೆ ಹೊರಡಿಸಲಾಗುವುದು. . ಕಿರುಕುಳ ನೀಡಿದವರ ವಿರುದ್ದ ಸುಮೋಟೊ ಕೇಸ್ ದಾಖಲಿಸಲಾಗುತ್ತದೆ. ಕಿರುಕುಳದ ಬಗ್ಗೆ ಎಸ್ ಪಿ ಡಿಸಿಗೆ ದೂರು ಕೊಡಬಹುದು.
ಜನರು ದೂರು ನೀಡಿದ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ . ಈ ಸಂಬಂಧ ರಾಜ್ಯಾದ್ಯಂತ ಸಹಾಯವಾಣಿ ಪ್ರಾರಂಭಿಸಲಾಗಿದೆ. ಸುಗ್ರೀವಾಜ್ಞೆ ಕುರಿತು ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
Key words: Microfinance, Sumoto case, Home Minister, Parameshwar