ಬೆಂಗಳೂರು,ಮಾರ್ಚ್,22,2025 (www.justkannada.in): ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಇಂದು ಕರ್ನಾಟಕ ಬಂದ್ ಮಾಡಲಾಗಿದ್ದು ಈ ಮಧ್ಯೆ ಬಂದ್ ವೇಳೆ ಮಿತಿ ಮೀರಿ ವರ್ತಿಸಿದರೇ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕಡೆಯಲ್ಲೂ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ ಎಂದರು.
ನಾವು ಮೂರ್ನಾಲ್ಕು ದಿನದಿಂದ ಎಲ್ಲಾ ಕ್ರಮ ಕೈ ಗೊಂಡಿದ್ದೇವೆ. ಎಲ್ಲಾ ಎಸ್ ಪಿ ಕಮಿಷನರ್ ಗೆ ಮಾಹಿತಿ ನೀಡಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥೆ ಮಾಡಿದ್ದೇವೆ. ಕಾನೂನು ಮೀರಿ ವರ್ತಿಸಿದ್ರೆ ಬಂಧಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
Key words: Karnataka Bandh, Action, Home Minister, Parameshwar, warns