ಹನಿಟ್ರ್ಯಾಪ್, ಕೊಲೆಯತ್ನ ಕೇಸ್ ತನಿಖೆ: ಯಾವುದೇ ವಿಚಾರ ಬಹಿರಂಗಪಡಿಸಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಏಪ್ರಿಲ್,1,2025 (www.justkannada.in):  ಸಚಿವ ಕೆ ಎನ್ ರಾಜಣ್ಣ ಹನಿ ಟ್ರಾಪ್ ಹಾಗೂ ಅವರ ಪುತ್ರ ಎಂಎಲ್ ಸಿ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಯಾವುದೇ ವಿಚಾರ ಬಹಿರಂಗಪಡಿಸಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್,  ಹನಿಟ್ರ್ಯಾಪ್ ಮತ್ತು ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ತನಿಖೆ ವೇಳೆ ಯಾವುದೇ ವಿಷಯವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ತನಿಖೆಯ ವರದಿ ಬಂದ ಬಳಿಕವಷ್ಟೇ ಮಾಹಿತಿ  ನೀಡಲು ಸಾಧ್ಯ ಎಂದು ಪರಮೇಶ್ವರ್ ತಿಳಿಸಿದರು.

Key words: Honeytrap, case, investigation, Home Minister, Parameshwar