ಬೆಂಗಳೂರು,ಏಪ್ರಿಲ್,6,2025 (www.justkannada.in): ರಾಜ್ಯ ಸರ್ಕಾರದ ವಿರುದ್ದ ಯುದ್ದ ಆರಂಭಿಸುತ್ತೇನೆ ಎಂದಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಅವರು ಕೇಂದ್ರ ಸಚಿವರಿದ್ದಾರೆ ದೊಡ್ಡ ಖಾತೆಯೂ ಯುದ್ದ ಅಂದ್ರೆ ಬಂದೂಕು ಹಿಡಿದು ಮಾಡ್ತಾರಾ. ಯುದ್ದ ಅಂದ್ರೆ ಟೀಕೆ ಟಿಪ್ಪಣಿ. ರಾಜ್ಯ ಸರ್ಕಾರ ಉತ್ತರ ಕೊಡಲು ಸಮರ್ಥವಿದೆ ಹೆಚ್ ಡಿಕೆ ದಾಖಲಾತಿ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ದಾಖಲೆ ಬಿಡುಗಡೆ ಬಳಿಕ ಉತ್ತರ ಕೊಡುವೆ. ಜನ ಹೆಚ್ ಡಿಕೆ ಯುದ್ದದ ಬಗ್ಗೆ ತೀರ್ಮಾನ ಮಾಡಬೇಕು. ಕುಮಾರಸ್ವಾಮಿಗೆ ರಾಜಕೀಯ ಯೋಜನೆ ಬಗ್ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಮಧ್ಯಂತರ ವರದಿ ಸಲ್ಲಿಕೆ ವಿಚಾರ . ನಾನು ಕೋವಿಡ್ ಮಧ್ಯಂತರ ವರದಿ ನೋಡಿಲ್ಲ ಕಳೆದ ಸಾರಿ ಕೊಟ್ಟ ವರದಿ ಬಗ್ಗೆ ಚರ್ಚೆಯಾಗಿದೆ. ಆರೋಗ್ಯ ಇಲಾಖೆಯಲ್ಲಿ ಕೆಲ ಎಫ್ ಐಆರ್ ದಾಖಲಾಗಿವೆ ಎಂದರು.
Key words: Home Minister, Parameshwar, Union Minister, HDK