ಬೆಂಗಳೂರು,ಫೆಬ್ರವರಿ,8,2025 (www.justkannada.in): ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದು ಬಿಜೆಪಿ 40 ಸ್ಥಾನಗಳಲ್ಲಿ ಎಎಪಿ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೇ ಕಾಂಗ್ರೆಸ್ ಮಾತ್ರ ಯಾವುದೇ ಕ್ಷೇತ್ರದಲ್ಲೂ ಖಾತೆ ತೆರೆದಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಿಸಲ್ಟ್ ಕಂಪ್ಲೀಟ್ ಆಗಲಿ ಆ ಮೇಳೆ ಚರ್ಚೆ ಮಾಡೋಣ. ಫಲತಾಂಶದ ಬಗ್ಗೆ ಎಐಸಿಸಿ ನಾಯಕರು ಚರ್ಚೆ ಮಾಡುತ್ತಾರೆ. ಒಂದೊಂದು ಚುನಾವಣೆ ಒಂದೊಂದು ರೀತಿ ಇರಲಿದೆ. ಬೇರೆ ರಾಜ್ಯದ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಪ್ರತಿಯೊಂದು ಚುನಾವಣೆ ಭಿನ್ನವಾಗಿರುತ್ತೆ ಎಂದು ತಿಳಿಸಿದ್ದಾರೆ.
Key words: Congress, Delhi Assembly, elections, Minister, Parameshwara