ಬೆಂಗಳೂರು,ಡಿಸೆಂಬರ್,31.2024 (www.justkannada.in): ತಮ್ಮ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ನಡೆಸಿದ ಪೋಸ್ಟರ್ ಅಭಿಯಾನಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಯಾವ ಚಳವಳಿಯನ್ನಾದರೂ ಮಾಡಿಕೊಳ್ಳಲಿ. ಬಟ್ಟೆಯನ್ನಾದರೂ ಹರಿದುಕೊಳ್ಳಲಿ. ಬಿಜೆಪಿಯವರು ದಾಖಲೆ ಇಟ್ಟುಕೊಂಡು ಮಾತನಾಡಲಿ. ಲಾಜಿಕ್ ಇದ್ದರೆ ನಾವು ಉತ್ತರ ಕೊಡಬಹದು. ನಮ್ಮ ಸಿದ್ದಾಂತವೇ ಬೇರೆ. ಅವರ ಸಿದ್ದಾಂತವೇ ಬೇರೆ . ನಾನು ಮೊದಲಿನಿಂದಲೂ ಅವರ ಸಿದ್ದಾಂತದ ವಿರುದ್ದವೇ ಇದ್ದೇವೆ. ಅದಕ್ಕೆ ಈ ರೀತಿ ಅರೋಪ ಮಾಡುತ್ತಾರೆ ಎಂದರು.
ಅಶೋಕ್ ಕೇಸ್ ಏನಾಯ್ತು? ಬಿಎಸ್ ವೈ ಕೇಸ್ ಏನಾಯ್ತು? ಪೇಸಿಎಂ ವಿಚಾರ ಮಾಧ್ಯಮದಲ್ಲೇ ಬಂತು ಅದನ್ನು ನಾವು ಮಾಡಿದ್ದು. ಸತ್ಯ ಹೇಳುವುದಕ್ಕೆ ತಾಕತ್ ಧಮ್ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿಯರವರು ಕಲಬುರಗಿಗೆ ಬರಲಿ ಎಳನೀರು ಟೀ, ಕಾಫಿ ಕೊಡುತ್ತೇವೆ. ಗುತ್ತಿಗೆದಾರ ಸಚಿನ್ ಕುಟುಂಬ ನ್ಯಾಯ ಒದಗಿಸಬೇಕು ಅಂತ ಹೇಳಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
Key words: Minister, Priyank Kharge, BJP, poster, campaign