ರಾಜಭವನವೀಗ ಬಿಜೆಪಿ ಕಚೇರಿ ಮತ್ತು ಆರ್ ಎಸ್ಎಸ್ ನ ಕೇಶವಾಕೃಪಾವಾಗಿದೆ- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಏಪ್ರಿಲ್,1,2025 (www.justkannada.in): ಗ್ರಾಮೀಣಾಭಿವೃದ್ದಿ ಬಿಲ್ ವಾಪಸ್  ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ದ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜಭವನವೀಗ ಬಿಜೆಪಿ ಕಚೇರಿ ಆರ್ ಎಸ್ಎಸ್ ನ ಕೇಶವಾಕೃಪವಾಗಿದೆ.  ತಮಿಳುನಾಡಿನಲ್ಲೂ ಇದೇ ರೀತಿ ಮಾಡಿದ್ದಾರೆ. ತಮಿಳುನಾಡಿನಂತೆ ನಾವು ಕೂಡ ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ ಎಂದರು.

ಸ್ಪಷ್ಟನೆ ಕೇಳಿದ್ರೆ ನಾವು ಕೊಡತ್ತೇವೆ.  ಹಾಗೆ ಸದನದಲ್ಲಿ ಬಿಲ್ ತರೋಕೆ ಆಗುತ್ತಾ..?  ಸದನದಲ್ಲಿ ಚರ್ಚೆ ಆಗುತ್ತೆ ಅಲ್ಲವಾ ವಿದೇಯಕ ಅಂಗೀಕಾರ ಮಾಡೋದು  ಸದನದಲ್ಲಿ ಅಲ್ವಾ..? ಆದರೆ ಕೇಂದ್ರ ಸರ್ಕಾರದ ಮಾತಿನಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

Key words: Raj Bhavan, BJP, RSS, office, Minister, Priyank Kharge