ಕಲ್ಬುರ್ಗಿ,ಏಪ್ರಿಲ್,7,2025 (www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಲು, ಮೊಸರು ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆಗೆ ಮುಂದಾಗಿದ್ದು ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಕಲ್ಬುರ್ಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದ ಬಿಜೆಪಿ ಬೆಲೆ ಏರಿಸಿದರೆ ಅದು ಮಾಸ್ಟರ್ ಸ್ಟ್ರೋಕ್ . ಆದರೆ ನಾವು ಬೆಲೆ ಏರಿಸಿದರೆ ಮಾತ್ರ ಜನರಿಗೆ ಹೊರೆಯಾಗುತ್ತಾ..? ಏರಿಕೆ ಮಾಡಿರುವ ಹಾಲಿನ ದರ ರೈತರಿಗೆ ಹೋಗುತ್ತಿದೆ. ತೈಲ ಬೆಲೆ ಕಡಿಮೆ ಮಾಡೋದು ನಮ್ಮ ಕೈಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ 16 ಶಾಸಕರ ಸದನದಿಂದ ಅಮಾನತು ಕುರಿತು ಪ್ರತಿಕ್ರಿಯಿಸಿ ಸಚಿವ ಪ್ರಿಯಾಂಕ್ ಖರ್ಗೆ, ಸ್ಫೀಕರ್ ಪೀಠಕ್ಕೆ ಅದರದ್ದೇ ಆದ ಗೌರವವಿದೆ. ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೊರುವುದು ಸರಿನಾ..? ಅಗೌರವ ತೋರಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾ..? ನಾನಾಗಿದ್ದರೇ ಇವರನ್ನು ಒಂದು ವರ್ಷ ಉಚ್ಚಾಟನೆ ಮಾಡುತ್ತಿದೆ ಎಂದು ಹೇಳಿದರು.
Key words: BJP, increases, prices, master stroke, Minister, Priyank Kharge