ಬೆಂಗಳೂರು,ಡಿಸೆಂಬರ್,15,2022(www.justkannada.in): ವೋಟರ್ ಐಡಿ ಹಗರಣ ಹೊರಬರುತ್ತಿದ್ದಂತೆ ಕುಕ್ಕರ್ ಬ್ಲಾಸ್ಟ್ ಷಡ್ಯಂತ್ರ ನಡೆಯಿತು ಎಂದು ಆರೋಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್.ಅಶೊಕ್ ಕಿಡಿಕಾರಿದರು.
ಈ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್, ಉಗ್ರರಿಗೆ ಕನಿಕರ ತೋರಿಸುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದ. ತಮ್ಮ ಹೇಳಿಕೆಯನ್ನ ಡಿಕೆ ಶಿವಕುಮಾರ್ ಹಿಂಪಡೆಯಬೇಕು. ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನವರು ಉಗ್ರರನ್ನ ದೇವಲೋಕದವರಂತೆ ನೋಡುತ್ತಾರೆ. ಮುಸ್ಲೀಂ ಟಾರ್ಗೆಟ್ ಆದಾಗ ಕಾಂಗ್ರೆಸ್ ಗೆ ಎಲ್ಲಿಲ್ಲದ ಉರಿ. ಕಸಬ್ ಗೆ ಬಿರ್ಯಾನಿ ತಿನ್ನಿಸಿ ಸಾಕಿಕೊಂಡಿದ್ದರು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವೋದನ್ನ ಮೊದಲು ಬಿಡಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.
Key words: Minister- R. Ashok -accused -Congress – terrorism.