ಬೆಂಗಳೂರು,ಅಕ್ಟೋಬರ್,25,2022(www.justkannada.in): ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂರಿಸಿದ್ಧಾರೆ. ಆದರೆ ಇವರ ಹಿಂದೆ ಸೋನಿಯಾ ಗಾಂಧಿ ಇದ್ದಾರೆ ಅಂತ ಗೊತ್ತಿದೆ. ಸ್ಟೇರಿಂಗ್ ಯಾರ ಬಳಿ ಇದೆ ಅಂತ ಗೊತ್ತಿದೆ. ಕಾಂಗ್ರೆಸ್ ನಾಯಕರು ರಿಮೋಟ್ ಕಂಟ್ರೋಲ್ ಗಾಡಿ ಇದ್ಧಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ರಾಜ್ಯ ಕಾಂಗ್ರೆಸ್ ಬಸ್ ಯಾತ್ರೆಯನ್ನು ಪ್ರಾರಂಭಿಸಲು ಮುಂದಾಗಿರುವ ಕುರಿತು ಮಾತನಾಡಿದ ಸಚಿವ ಆರ್. ಅಶೋಕ್, ಕಾಂಗ್ರೆಸ್ ಕೊನೆ ಮೊಳೆಯನ್ನು ಕರ್ನಾಟಕದಲ್ಲಿ ಹೊಡೆಯುತ್ತದೆ. ಕಾಂಗ್ರೆಸ್ ಈಗಾಗಲೇ ಮುಳುಗುತ್ತಿದೆ. ಅವರು ಬಸ್ಸಲ್ಲಾದ್ರೂ ಯಾತ್ರೆ ಮಾಡಲಿ, ಟ್ರೈನಲ್ಲಾದರೂ ಯಾತ್ರೆ ಮಾಡಲಿ. ಪ್ಲೇನ್ ನಲ್ಲಾದರೂ ಯಾತ್ರೆ ಮಾಡಲಿ ಜನರಂತು ಮರುಳಾಗಲ್ಲ ಎಂದು ಕಾಲೆಳೆದರು.
ಬಿಜೆಪಿ SC, ST ಮೀಸಲಾತಿ ಪ್ರಮಾಣ ಹೆಚ್ಚಿಸುವ ಕೆಲಸ ಮಾಡಿದೆ. ನ್ಯಾ. ನಾಗಮೋಹನ ದಾಸ್ ಸಮಿತಿ ಮಾಡಿದ್ದು ವಿಪಾಕ್ಷ ನಾಯಕ ಸಿದ್ದರಾಮಯ್ಯ ಅಲ್ಲ, ಹೆಚ್.ಡಿ ಕುಮಾರಸ್ವಾಮಿ ಸಮಿತಿ ಮಾಡಿದ್ದು, ಸಿದ್ದರಾಮಯ್ಯನವರ ನಾಟಕ ಕಂಪನಿಯ ಬಣ್ಣ ಬಯಲಾಗಿದೆ. ಬಸ್ಕಿ ಹೊಡೆಯೋದು ಕೈಹಿಡಿದು ಓಡೋದನ್ನು ಮಾಡಿದ್ದಾರೆ, ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಎಣ್ಣೆ-ಸೀಗೆಕಾಯಿ ರೀತಿ ಎಂದು ಕುಟುಕಿದರು.
ಶಿವಮೊಗ್ಗದಲ್ಲಿ ನಡೆದ ಗಲಾಟೆ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಕೇಂದ್ರ ಸರ್ಕಾರ ಪಿಎಫ್ ಐ ಬ್ಯಾನ್ ಮಾಡಿದೆ. ಅದೇ ರೀತಿ ಕೆಎಫ್ ಡಿಯನ್ನು ಬ್ಯಾನ್ ಮಾಡಬೇಕು. ಕಿಡಿಗೇಡಿಗಳನ್ನು ಮುಲಾಜಿಲ್ಲದೆ ಮಟ್ಟ ಹಾಕುತ್ತೇವೆ. ಯಾರೇ ಇದ್ದರು ಮಟ್ಟ ಹಾಕುತ್ತೇವೆ ಎಂದು ಹೇಳಿದರು.
Key words: Minister -R. Ashok- AICC President – Congress -Bus Yatra