ಹೇಳಿದ ತಕ್ಷಣ ತನಿಖೆ ಮಾಡಲು ನಾವೇನು ಅವರ ಗುಲಾಮರೇ..? ಕಂದಾಯ ಸಚಿವ ಆರ್,ಅಶೋಕ್ ಕಿಡಿ…

ಬೆಂಗಳೂರು,ಜು,27,2020(www.justkannada.in):  ಕೋವಿಡ್ ಕಿಟ್ ಖರೀದಿಯಲ್ಲಿ 2ಸಾವಿರ ಕೋಟಿ ಅವ್ಯವಹಾರ ನಡೆದಿದ್ದು ನ್ಯಾಯಾಂಗ ತನಿಖೆ ನಡೆಸಿ ಎಂದು ಆಗ್ರಹಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.jk-logo-justkannada-logo

ಕಾಂಗ್ರೆಸ್ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದೆ. ಈಗಾಗಲೇ ಸಂಬಂಧಿಸಿದ ಸಚಿವರು ಉತ್ತರ ನೀಡಿದ್ದಾರೆ. ಹೀಗಾಗಿ ಅವರು ತನಿಖೆ ಮಾಡಿ ಎಂದು ಹೇಳಿದ ತಕ್ಷಣ ತನಿಖೆ ಮಾಡಲು ನಾವೇನು ಅವರ ಗುಲಾಮರೇ…?  ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ನಾವು ಸಾವಿರ ಪತ್ರ ಬರೆದಿದ್ದೆವು. ಆರ್​ಟಿಐ ಮೂಲಕ ಅವರು ಮಾಹಿತಿ ಪಡೆಯಬಹುದು ಆದರೆ ಅವರು ಎಷ್ಟು ಉತ್ತರ ನೀಡಿದ್ದರು ಗೊತ್ತಿದೆ  ಎಂದು  ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಆರ್.ಅಶೋಕ್ ಟಾಂಗ್ ನೀಡಿದರು.minister-r-ashok-investigation-congress-slave

ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ನೆರೆ ಕಷ್ಟ ಕಾಲದಲ್ಲೂ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯವನ್ನ ಮುನ್ನಡೆಸಿದ್ದಾರೆ. ಒಂದು ವರ್ಷ ಜನಪರ ಸರ್ಕಾರವಾಗಿ ಬಿಎಸ್​ವೈ ಕೆಲಸ ಮಾಡಿದ್ದಾರೆ. ಪ್ರಾರಂಭದಲ್ಲೇ ನೆರೆ ಉಂಟಾಗಿತ್ತು. ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾರೇ ಇದ್ದಿದ್ರೂ ಇಂತಹ ಪರಿಸ್ಥಿತಿ ನಿಭಾಯಿಸಲು ಆಗುತ್ತಿರಲಿಲ್ಲ ಎಂದು ಗುಣಗಾನ ಮಾಡಿದರು.

 

Key words: minister –R.Ashok- Investigation-congress- Slave