ಶಾಸಕ ಯತ್ನಾಳ್ ಬಳಿ ಮಾಹಿತಿ ಇದ್ರೆ ಬಹಿರಂಗ ಪಡಿಸಲಿ-ಸಚಿವ ರಾಮಲಿಂಗರೆಡ್ಡಿ ತಿರುಗೇಟು

ಬೆಂಗಳೂರು,ಮಾರ್ಚ್,17,2025 (www.justkannada.in): ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಚಿವರ ಕೈವಾಡವಿದೆ ಎಂದು ಆರೋಪಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಮಾಹಿತಿ ಇದ್ರೆ ಬಹಿರಂಗ ಪಡಿಸಲಿ.  ಸಚಿವರ ಹೆಸರು ಬೇಗ ಹೇಳಿದ್ರೆ ತನಿಖೆಗೂ ಕೂಡ ಅನುಕೂಲವಾಗುತ್ತದೆ.  ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದರು.

Key words: MLA, Yatnal, Minister, Ramalingareddy