ಬೆಂಗಳೂರು,ಏಪ್ರಿಲ್,17,2025 (www.justkannada.in): ಡೀಸೆಲ್ ಬೆಲೆ ಇಳಿಕೆ ಸೇರಿ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಹೂಡಿರುವ ಮುಷ್ಕರ ಸಂಬಂಧ ಸಾರಿಗೆ ಸಚಿವ ರಾಮಲಿಂಗರೆಡ್ಡಿ 3ನೇ ಸುತ್ತಿನ ಸಭೆಗೆ ಮುಂದಾಗಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಲಾರಿ ಮಾಲೀಕರ ಸಂಘದ ಜೊತೆ ವಿಧಾನಸೌಧದಲ್ಲಿ ಸಚಿವ ರಾಮಲಿಂಗರೆಡ್ಡಿ ಸಭೆ ನಡೆಸಲಿದ್ದಾರೆ. ಈಗಾಗಲೇ ಸಚಿವ ರಾಮಲಿಂಗರೆಡ್ಡಿ ಲಾರಿ ಮಾಲೀಕರ ಸಂಘದ ಜೊತೆ ಮೊದಲ ಸುತ್ತಿನ ಸಭೆ ನಡೆಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ 2ನೇ ಸುತ್ತಿನ ಸಭೆ ನಡೆಸಿದ್ದರು. ಈ ಸಭೆಗಳು ವಿಫಲವಾಗಿದ್ದವು.
ನಂತರ ಲಾರಿ ಮಾಲೀಕರ ಸಂಘದ ಮುಷ್ಕರ ಮುಂದುವರೆದಿತ್ತು. ಇದೀಗ ಮತ್ತೆ ಲಾರಿ ಮಾಲೀಕರ ಜೊತೆ ಸಚಿವ ರಾಮಲಿಂಗರೆಡ್ಡಿ ಸಭೆಗೆ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಲಾರಿ ಮಾಲೀಕರ ಸಭೆ ನಿಗದಿಯಾಗಿತ್ತು. ಎಲ್ಲಾ ಜಿಲ್ಲಾಧ್ಯಕ್ಷರನ್ನ ಕರೆದು ಸಭೆ ಮೂಲಕ ಮುಷ್ಕರವನ್ನ ತೀವ್ರಗೊಳಿಸಲು ಪ್ಲಾನ್ ಮಾಡಲಾಗಿತ್ತು. ಅದರೆ ಇದೀಗ ಸಚಿವರೇ ಸಭೆ ನಡೆಸಲು ಮುಂದಾಗಿದ್ದು ಈ ಹಿನ್ನೆಲೆ ಲಾರಿ ಮಾಲೀಕರ ಸಭೆ ರದ್ದಾಗಿದೆ.
Key words: Lorry owners, strike, Minister, Ramalingareddy, meeting