ಶಿವಮೊಗ್ಗ,ಮಾರ್ಚ್,3,2021(www.justkannada.in): ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಪ್ರಕರಣ ಸಂಬಂಧ ಇದು ಸತ್ಯ, ಅಸತ್ಯ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಸತ್ಯಕ್ಕೆ ದೂರವಾದ ಘಟನೆ. ಅನ್ನಿಸುತ್ತಿದೆ. ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಷಡ್ಯಂತ್ರ ಇದೆ. ದುರುದ್ದೇಶ ಪೂರ್ವಕವಾಗಿ ಸಚಿವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಇದರ ಸತ್ಯ, ಸತ್ಯತೆ ತಿಳಿಯಲು ಪರಿಶೀಲಿಸಬೇಕಾಗುತ್ತದೆ. ಘಟನೆ ಕುರಿತು ತನಿಖೆ ನಡೆದ ನಂತರವಷ್ಟೇ ನಿಜ ಹೊರಬರಲು ಸಾಧ್ಯ. ಹಾಗಾಗಿ ರಮೇಶ್ ಜಾರಕಿಹೊಳಿಯ ರಾಜೀನಾಮೆ ಪ್ರಶ್ನೆ ಉದ್ಭವಿಸದು. ಪ್ರಕರಣದ ಕುರಿತು ಪಕ್ಷದ ವರಿಷ್ಠರು ಗಮನ ಹರಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಸಿಡಿ ಪ್ರಕರಣದ ಮೂಲಕ ಜಾರಕಿಹೊಳಿಯನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಯಾರೋ ಮೂರನೇ ವ್ಯಕ್ತಿ ಬಂದು ದೂರು ನೀಡಿದ್ದಾರೆ. ಯಾರು ಯಾವ ದುರುದ್ದೇಶದಿಂದ ಮಾಡಿದ್ದಾರೋ ಗೊತ್ತಿಲ್ಲ. ಮೇಲ್ನೋಟಕ್ಕೆ ಇದು ಸತ್ಯಕ್ಕೆ ದೂರವಾದ ಘಟನೆ ಎಂದು ಅನಿಸುತ್ತಿದೆ. ಹಾಗಾಗಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಪ್ರಶ್ನೆ ಬರುವುದಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
Key words: minister-Ramesh jarakiholi –video- case- DCM Ashwath Narayan -reaction