ಬೆಂಗಳೂರು,ಜೂ,9,2020(www.justkannada.in): ಕಾಂಗ್ರೆಸ್ ಶಾಸಕರ ರಾಜೀನಾಮೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಮೆಂಟಲ್ ಗಳು ಏನೇನೋ ಮಾತಾಡ್ತಾರೆ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಮೆಂಟಲ್ ಅಂತ ಡಿ.ಕೆ ಶಿವಕುಮಾರ್ ಹೇಳಿರುವ ಹೇಳಿಕೆ ಗಮನಿಸಿದ್ದೇನೆ. ಯಾರು ಮೆಂಟಲ್ ಅಂತ ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸುತ್ತೇನೆ. ಯಾರು ಮೆಂಟಲ್ ಆಗಿದ್ದಾರೆ ಅಂತ ಅವರ ಬಾಡಿ ಲಾಂಗ್ವೇಜ್ ನೋಡಿನೇ ತಿಳಿದುಕೊಳ್ಳಬಹುದು ಎಂದು ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ರಮೇಶ್ ಕತ್ತಿ, ಉಮೇಶ್ ಕತ್ತಿ, ಪ್ರಭಾಕರ್ ಕೋರೆಗೆ ಅಸಮಧಾನ ವಿಚಾರ, ಯಾರಿಗೂ ಅಸಮಧಾನ ಆಗಿಲ್ಲ. ಉಮೇಶ್ ಕತ್ತಿಗೆ ನಾಮಪತ್ರ ಬಳಿಕ ಭೇಟಿ ಮಾಡ್ತೇನೆ. ರಮೇಶ್ ಕತ್ತಿ, ಪ್ರಭಾಕರ್ ಕೋರೆಯವರು ಬೇಸರಗೊಂಡಿಲ್ಲ. ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದು ಅವರಿಗೂ ಖುಷಿಯಾಗಿದೆ. ನಾವು ಬೆಳಗಾವಿ ನಾಯಕರು ಮತ್ತೆ ಸಭೆ ಸೇರ್ತೇವೆ. ನಾವೆಲ್ಲ ಊಟಕ್ಕೆ ಆಗಾಗ ಸೇರೋದು ಮೊದಲಿಂದಲೂ ಬಂದಿರುವ ಪದ್ಧತಿ ಅದರಲ್ಲಿ ಯಾವುದೇ ತಪ್ಪು ಹುಡುಕುವ ಅಗತ್ಯವಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಕಾಲೆಳೆದ ರಮೇಶ್ ಜಾರಕಿಹೊಳಿ…
ರಾಜ್ಯಸಭೆಗೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅಭ್ಯರ್ಥಿಯಾಗಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ನಮ್ಮ ಪಕ್ಷ ಶಿಸ್ತಿನ ಪಕ್ಷ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವು ಬದ್ಧ. ಈ ಪಕ್ಷದಲ್ಲಿ ಅಪಸ್ವರ ಇರಲು ಸಾಧ್ಯವಿಲ್ಲ. ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಬೇರೆ ಪಕ್ಷಗಳು ಬಿಜೆಪಿಯನ್ನು ನೋಡಿ ಕಲಿಯುವುದು ತುಂಬಾ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್, ಜೆಡಿಎಸ್ ಕಾಲೆಳೆದರು.
Key words: Minister- ramesh jarkiholi-DK shivakumar-mental-statement