ಶಿವಮೊಗ್ಗ,ಮಾರ್ಚ್,15,2025 (www.justkannada.in): ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಕೇವಲ ರಾಜ್ಯ ಸರ್ಕಾರದ ಲೋಪ ಎನ್ನುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಲೋಪವಿಲ್ಲವೇ..? ಕಸ್ಟಮ್ಸ್ ವೈಫಲ್ಯ ಯಾರದ್ದು? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಈ ಕುರಿತು ಇಂದು ಮಾತನಾಡಿದ ಸಚಿವ ಸಂತೋಷ್ ಲಾಡ್, ರನ್ಯಾರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ಧೇ ವೈಪಲ್ಯ ಎಂಬಂತೆ ತೋರಿಸಲಾಗುತ್ತಿದೆ. ಹಾಗಿದ್ದರೆ ಕಸ್ಟಮ್ಸ್ ಯಾವುದರ ಅಡಿ ಬರುತ್ತೆ? ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 10 ವರ್ಷಗಳಿಂದ ಒಂದೇ ಕಡೆ ಇದ್ದಾರೆ. ಅಲ್ಲಿಯೂ ಲೋಪವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಒಂದೇ ಜವಾಬ್ದಾರಿ ಅಲ್ಲ. ಕೇಂದ್ರ ಸರ್ಕಾರವೂ ಇದಕ್ಕೆ ಉತ್ತರಿಸಬೇಕು ಎಂದರು.
ಗ್ಯಾರಂಟಿ ಅನುಷ್ಟಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನ ನೇಮಿಸಿ ಸರ್ಕಾರಿ ಸಂಬಳ ನೀಡುತ್ತಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಗ್ಯಾರಂಟಿ ಅನುಷ್ಠಾನದಿಂದ ಹಣ ದುರುಪಯೋಗವಾಗುತ್ತಿಲ್ಲ. ಗ್ಯಾರಂಟಿ ಫಲಾನುಭವಿಗಳಿಗೆ ತಲುಪುತ್ತಿದೆಯಾ ಪಾರದರ್ಶಕವಾಗಿದೆಯೇ ಎಂಬ ಕಾರಣಕ್ಕೆ ಮೇಲುಸ್ತುವಾರಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ಇದರಲ್ಲಿ ಶಾಸಕರ ಹಕ್ಕನ್ನ ಮೊಟಕುಗೊಳಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
Key words: Ranayarao, Gold Smuggling Case, No Center, Minister, Santosh Lad