ಕೆಪಿಸಿಸಿ ಅಧ್ಯಕ್ಷ ಖಂಡ್ರೆ ಆಗಲಿ ಯಾರೇ ಆಗಲಿ ನಮ್ಮ ಸಪೋರ್ಟ್ ಇದ್ದೇ ಇರುತ್ತೆ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಏಪ್ರಿಲ್,4,2025 (www.justkannada.in): ಕೆಪಿಸಿಸಿ ಅಧ್ಯಕ್ಷ ಈಶ್ವರ್ ಖಂಡ್ರೆ ಆಗಲಿ ಯಾರೇ ಆಗಲಿ ನಮ್ಮ ಸಪೋರ್ಟ್ ಇದ್ದೇ ಇರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ  ಈಶ್ವರ್ ಖಂಡ್ರೆ, ನನ್ನ ಹೆಸರಿದೆ. ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿಯಲ್ಲಿ ಹೈಕಮಾಂಡ್ ಜತೆ ಚರ್ಚಿಸಿದ್ದು ಸಂಜೆ ತಿಳಿಯುತ್ತದೆ.  ಸಿಎಂ ಸಿದ್ದರಾಮಯ್ಯ ಏನೇನು ಚರ್ಚಿಸಿದ್ರು ಅಂತಾ
ಸಿಎಂ ವಾಪಸ್ ಬಂದ ಮೇಲೆ ಚರ್ಚಿಸುತ್ತೇನೆ  ಎಂದರು.

ಹಾಯ್ ಅಂದ್ರೆ ನಾವೂ ಹಾಯ್ ಅನ್ನಬಾರದು, ಬೈಬೈ ಅನ್ನಬೇಕು

ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಹನಿಟ್ರ್ಯಾಪ್ ನಾವು ಎಚ್ಚರಿಕೆಯಿಂದಿರಬೇಕು.  ಇದಕ್ಕೆಲ್ಲಕೂ ಇತಿಶ್ರೀ ಹಾಡಬೇಕು.  ಹಾಯ್ ಅಂದ್ರೆ ನಾವು ಹಾಯ್ ಅನ್ನಬಾರದು. ಬೈಬೈ ಅಂತ ಓಡಿ ಹೋಗಬೇಕಷ್ಟೆ. ರಾಜಣ್ಣ ಹಾಯ್ ಅಂದವರಿಗೆ ಬಾಯ್ ಅಂದಿದ್ದಾರಂತೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Key words: KPCC President, support, Ishwar Khandre, Minister, Sathish Jarkiholi