ಬೆಂಗಳೂರು,ಏಪ್ರಿಲ್,18,2025 (www.justkannada.in): ಜಾತಿಗಣತಿ ವರದಿ ಬಹಳ ಜಟಿಲವಾದ ಸಮಸ್ಯೆ. ಹೀಗಾಗಿ. ಜಾತಿಗಣತಿ ವರದಿ ಜಾರಿ ಇನ್ನೂ ಒಂದು ವರ್ಷ ಆಗಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಜಾತಿಗಣತಿ ವರದಿ ಬಹಳ ಜಟಿಲವಾದ ಸಮಸ್ಯೆ. ಹೀಗಾಗಿ ಬಹಳಷ್ಟು ಚರ್ಚೆಯಾಗಬೇಕಿದೆ. ವರದಿ ಸ್ವೀಕಾರಕ್ಕೆ 10 ವರ್ಷ ತೆಗೆದುಕೊಂಡಿದ್ದೇವೆ. ಹೀಗಾಗಿ ಜಾತಿ ಗಣತಿ ವರದಿ ಜಾರಿಯಾಗಲು ಒಂದು ವರ್ಷ ಆಗಬಹುದು. ಜಾತಿ ಗಣತಿವರದಿ ಜಾರಿಗೆ ಆತುರ ಇಲ್ಲ ಎಂದರು.
ವರದಿ ಬಗ್ಗೆ ಸಮಗ್ರ ಚರ್ಚೆಯಾದರೆ ಮಾತ್ರ ವರದಿ ಜಾರಿಯಾಗುತ್ತೆ. ಮೀಸಲಾತಿ ಹೆಚ್ಚು ಮಾಡುವುದು ಈಗ ಅಸಾಧ್ಯ. ಅವರು ಶಿಫಾರಸು ಮಾಡಿದ್ದಾರೆ ಅಷ್ಟೆ. ಸಮೀಕ್ಷೆ ವೇಳೆ ಅಂಕಿ ಸಂಖ್ಯೆ ಬರೆಸಿದ್ದು ಜನರೇ ಅಲ್ವಾ. ಈಗ ಅವರೇ ವಿರೋಧ ಮಾಡುತ್ತಿದ್ದಾರೆ. ಯಾವುದೇ ಸಮಾಜಕ್ಕೆ ನೋವಾಗದಂತೆ ತೀರ್ಮಾನ ಮಾಡುತ್ತೇವೆ ಎಂದರು.
Key words: Caste census, report, One year, Minister, Satish Jarkiholi