ಚಿತ್ರದುರ್ಗ,ಸೆ,3,2019(www.justkannada.in): ದೆಹಲಿ ನಿವಾಸದ ಮೇಲೆ ಐಟಿ ದಾಳಿ ವೇಳೆ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಟ್ಟಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಳಿ ಸಚಿವ ಶ್ರೀರಾಮುಲು ಕ್ಷಮೆ ಕೇಳಿದ್ದಾರೆ.
ಉಪ್ಪು ತಿಂದವರು ನೀರು ಕುಡಯಲೇ ಬೇಕು ಎಂದು ಹೇಳಿಕೆ ನೀಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಇದೀಗ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕಣ್ಣೀರಿಗೆ ಮರುಗಿ ಕ್ಷಮೆ ಕೇಳಿದ್ದಾರೆ. ನನ್ನ ಮಾತಿನಿಂದ ನೋವಾಗಿದ್ದರೆ ಡಿಕೆಶಿ ಅಣ್ಣನವರೇ ಕ್ಷಮಿಸಿ, ಕೈ ಮುಗಿದು ಕೇಳುತ್ತೇನೆ. ನನ್ನನ್ನು ಕ್ಷಮಿಸಿ, ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವೇ ಹೊರತು ವೈಯಕ್ತಿಕ ಅಲ್ಲ, ಡಿಕೆಶಿ ಅಣ್ಣನಿಗೆ ರಾಜಕೀಯವಾಗಿ ಮಾತ್ರ ಮಾತನಾಡಿದ್ದು ಅದನ್ನ ವೈಯಕ್ತಿವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಸಂಕಷ್ಟದಲ್ಲಿರುವಾಗ ಚುಚ್ಚು ಮಾತು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಬಗ್ಗೆ ಟೀಕೆ ಮಾಡಲು ಹೋಗಲ್ಲ. ನನ್ನಿಂದ ತಪ್ಪಾಗಿದ್ದರೇ ದಯವಿಟ್ಟು ಕ್ಷಮಿಸಿ ಎಂದು ಸಚಿವ ಶ್ರೀರಾಮುಲು ಕ್ಷಮೆ ಕೋರಿದ್ದಾರೆ.
ಶ್ರೀರಾಮುಲು ಹೇಳಿಕೆ ಕುರಿತು ದೆಹಲಿಯಲ್ಲಿ ನಿನ್ನೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಮಿತ್ರರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ನಾನು ಉಪ್ಪು ತಿಂದರೆ ನೀರು ಕುಡಿಯಲು ಸಿದ್ಧ ಎಂದು ಹೇಳಿದ್ದರು. ಈ ವೇಳೆ ಕುಟುಂಬದವರನ್ನು ನೆನೆದು ಕಣ್ಣೀರು ಹಾಕಿದ್ದರು. ಇದೀಗ ಡಿಕೆಶಿ ಕಣ್ಣೀರಿಗೆ ಸಚಿವ ಶ್ರೀರಾಮುಲು ಮರುಗಿದ್ದಾರೆ.
Key words: Minister- Sriramulu- apologized – former minister- DK Shiv Kumar