ಮೈಸೂರು ಡಿಸಿ ಆದೇಶ ರದ್ಧಾದ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದು ಹೀಗೆ…?

ಮೈಸೂರು,ಏಪ್ರಿಲ್,20,2021(www.justkannada.in): ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೋವಿಡ್ ನೆಗೆಟಿವ್ ವರದಿ ತರಬೇಕೆಂದು.ಮೈಸೂರು ಡಿಸಿ ಆದೇಶಿಸಿರಲಿಲ್ಲ. ಕೇವಲ ಸಲಹೆ ನೀಡಿ ಮನವಿ ಮಾಡಿದ್ದರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.jk

ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೋವಿಡ್ ನೆಗೆಟಿವ್ ವರದಿ ತರಬೇಕೆಂದು.ಮೈಸೂರು ಡಿಸಿ ಆದೇಶಿಸಿರಲಿಲ್ಲ. ಇದನ್ನ ಯಾರೋ ತಿರುಚಿ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಡಿಸಿ ಅವರ ಎಲ್ಲ ಆದೇಶಗಳು ರದ್ದಾದವು. ಕಾರ್ಯದರ್ಶಿಗಳಿಗೆ ನಾನು ಮನವರಿಕೆ ಮಾಡಿಕೊಡಲು ಪ್ರಯತ್ನ ಪಟ್ಟೆ. ಅಷ್ಟರಲ್ಲಿ ಕಾಲ ಮಿಂಚಿತ್ತು ಎಂದು ಹೇಳಿದರು.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಲಾಕ್‌ ಡೌನ್ ಅವಶ್ಯಕತೆ ಇಲ್ಲ….

ಕೊರೋನಾ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಲಾಕ್ ಡೌನ್ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಲಾಕ್‌ ಡೌನ್ ಅವಶ್ಯಕತೆ ಇಲ್ಲ. ಲಾಕ್‌ ಡೌನ್ ನಿಂದ ಜನರು ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ಈಗ ಲಾಕ್‌ ಡೌನ್ ಅವಶ್ಯಕತೆ ಇಲ್ಲ. ಕಠಿಣ ಕ್ರಮಗಳ‌ ಮೂಲಕ ವೈರಸ್ ನಿಯಂತ್ರಣ ಮಾಡಬಹುದು ಎಂದು ಹೇಳಿದರು.minister-st-somashekhar-clarified-mysore-dc-order-canceled

ಸಿದ್ದರಾಮಯ್ಯನವರೇ ಐಸಿಯುನಲ್ಲಿದ್ದಾರೆ….

ಸರ್ಕಾರ ಐಸಿಯುನಲ್ಲಿದೆ’ ಸಿಎಂ ಆಸ್ಪತ್ರೆಯಲ್ಲಿದ್ದಾರೆಂಬ  ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯನವರೇ ಐಸಿಯುನಲ್ಲಿದ್ದಾರೆ. ಸರ್ಕಾರವೇನು ಐಸಿಯುವಿನಲ್ಲಿ ಇಲ್ಲ. ಸಿಎಂಗೆ ಕೋವಿಡ್ ಪಾಸಿಟಿವ್ ಇರುವ ಕಾರಣ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಟಾಂಗ್ ನೀಡಿದರು.

Key words: Minister- ST Somashekhar -clarified – Mysore DC- order – canceled.