ಮೈಸೂರು,ಜೂ,11,2020(www.justkannada.in): ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರ್ಯಾಂಕಿಂಗ್ ಫ್ರೇಮ್ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯ ಪಾತ್ರವಾಗಿದ್ದು, 27ನೇ ರ್ಯಾಂಕ್ (Rank) ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಮೈಸೂರು ವಿಶ್ವವಿದ್ಯಾಲಯಕ್ಕೆ ಮತ್ತೊಂದು ಗರಿ ಮೂಡಿದಂತಾಗಿರುವುದಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಈ ಬಗ್ಗೆ ಸಚಿವ ಎಸ್.ಟಿ ಸೊಮಶೇಖರ್ ಅಭಿನಂದನೆ ವ್ಯಕ್ತಪಡಿಸಿದ್ದು ಹೀಗೆ…
ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಎಂಎಚ್ ಆರ್ ಡಿ ಅಡಿಯಲ್ಲಿ ಕೊಡಮಾಡಲಾಗುತ್ತದೆ. ಭಾರತದಲ್ಲಿರುವ ಎಲ್ಲ ವಿವಿಧ ವಿಶ್ವವಿದ್ಯಾಲಯಗಳ ಸಾಧನೆಗಳನ್ನು ಮಾನದಂಡಗಳನ್ನು ಇಟ್ಟುಕೊಂಡು ರ್ಯಾಂಕ್ ಅನ್ನು ಕೊಡಲಾಗುತ್ತದೆ. ಈಗ ಹೆಮ್ಮೆಯ ವಿಚಾರವೆಂದರೆ ಪ್ರಸಕ್ತ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯವು 27ನೇ ರ್ಯಾಂಕ್ ಗೆ ಭಾಜನವಾಗಿರುವುದನ್ನು ಕೇಳಿ ಸಂತಸವಾಗಿದೆ.
ಇನ್ನು ಐಐಟಿ, ಐಐಎಸ್ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಮಾನದಂಡವನ್ನಾಗಿ ಪರಿಗಣಿಸಿ ಕೊಡಲಾಗುವ ರ್ಯಾಂಕಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾಲಯವು 47ನೇ ರ್ಯಾಂಕ್ ಪಡೆದುಕೊಂಡಿದೆ. ಅಲ್ಲದೆ, ಈಗ ಲಭಿಸಿರುವ 27ನೇ ರ್ಯಾಂಕ್ ಸ್ಥಾನವು ಕಳೆದ ವರ್ಷ 54ನೇ ಸ್ಥಾನದಲ್ಲಿತ್ತು. ಅಂದರೆ ಈ ಪ್ರಮಾಣ ಉತ್ತಮಗತಿಯಲ್ಲಿ ಸಾಗಿದೆ ಎಂಬುದು ಖಾತ್ರಿಯಾದಂತಾಗಿದೆ. ಎನ್ಐಆರ್ ಎಫ್ ರ್ಯಾಂಕ್ ನಿಂದ ಹಲವು ಉಪಯೋಗಗಳಿವೆ. ಕೆಲವೊಂದು ಪ್ರಾಜೆಕ್ಟ್ ಗಳಿಗೆ ಅರ್ಜಿ ಹಾಕುವ ಸಂದರ್ಭದಲ್ಲಿ ನೀವು ಎನ್ಐಆರ್ ಎಫ್ ರ್ಯಾಂಕ್ ಪಟ್ಟಿಯಲ್ಲಿ 50ರೊಳಗೆ ಇದ್ದರೆ ಮಾತ್ರ ಅನುಮತಿ ಕೊಡಲಾಗುತ್ತಿರುವುದರಿಂದ ಅಂತಹ ಸೌಲಭ್ಯವನ್ನು ವಿಶ್ವವಿದ್ಯಾಲಯ ಪಡೆದೊಕೊಳ್ಳಬಹುದಾಗಿದೆ. ಹಾಗಾಗಿ ವಿಶ್ವವಿದ್ಯಾಲಯವು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ಎಂದು ನಾನು ಆಶಿಸುವೆ.
ಈ ಸಾಧನೆ ಹಿಂದೆ ಸಂಘಟಿತ ಶ್ರಮವಿದೆ. ಕುಲಪತಿಗಳು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯ ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಹೇಮಂತ ಕುಮಾರ್ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ಇನ್ನಷ್ಟು ಸಾಧನೆಗಳನ್ನು ಮಾಡಲಿ. ಜೊತೆಗೆ
ಹತ್ತು ಹಲವು ಪ್ರಥಮಗಳಿಗೆ ಭಾಜನವಾಗಿರುವ ಮೈಸೂರು ವಿಶ್ವವಿದ್ಯಾಲಯವು ಇನ್ನಷ್ಟು ಪ್ರಥಮಗಳನ್ನು ದಾಖಲು ಮಾಡಲಿ ಎಂದು ಆಶಿಸುತ್ತೇನೆ.
key words: Minister -ST Somashekhar -congratulates -Mysore university