ಮೈಸೂರು,ನವೆಂಬರ್,1,2022(www.justkannada.in): ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಾಗೂ ಜಂಬೂ ಸವಾರಿ ಮೆರವಣಿಗೆ ಅದ‍್ಧೂರಿಯಾಗಿ ನೆರವೇರಿತು. ಮೈಸೂರು ದಸರಾ ಮುಗಿದು ಒಂದು ತಿಂಗಳು ಕಳೆಯುತ್ತಿದ್ದು ಈ ನಡುವೆ ಇಂದು ದಸರಾದಲ್ಲಿ ಆದ ಖರ್ಚು ವೆಚ್ಚದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡಿದರು.
2022 ನೇ ಸಾಲಿನ ದಸರಾ ಮಹೋತ್ಸವದ ಖರ್ಚು,ವೆಚ್ಚದ ಲೆಕ್ಕವನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಂಡಿಸಿದರು. ಮೂಡಾದಿಂದ 10 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ, ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ, ಪ್ರಯೋಜಕತ್ವದಿಂದ 32 ಲಕ್ಷದ 50 ಸಾವಿರ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76 ಲಕ್ಷ ಸೇರಿದಂತೆ ಒಟ್ಟು 31 ಕೋಟಿ, 8 ಲಕ್ಷದ 88 ಸಾವಿರದ 819 ರೂ. ಸಂಗ್ರಹವಾಗಿದೆ.
ಮೈಸೂರು ದಸರಾ ಮಹೋತ್ಸವಕ್ಕೆ ಒಟ್ಟು ಖರ್ಚು 26 ಕೋಟಿ, 54 ಲಕ್ಷದ 49 ಸಾವಿರದ 58 ರೂಗಳು. ಮಂಡ್ಯ, ಚಾಮರಾಜನಗರ ಮತ್ತು ಹಾಸನ ದಸರಾಕ್ಕೆ ಒಟ್ಟು ಖರ್ಚು 2 ಕೋಟಿ 20 ಲಕ್ಷ ಖರ್ಚಾಗಿದೆ. ಒಟ್ಟಾರೆ ಖರ್ಚು 28 ಕೋಟಿ, 74 ಲಕ್ಷದ 49 ಸಾವಿರದ 58 ರೂಗಳಾಗಿದೆ. ಉಳಿಕೆ ಹಣ ಒಟ್ಟು 2 ಕೋಟಿ, 34 ಲಕ್ಷದ 39 ಸಾವಿರದ 761 ರೂಗಳು ಉಳಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ ಮತ್ತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಕ್ರೂಟ್ನಿ ಮಾಡಲು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೂಚನೆ ನೀಡಿದರು
Key words: Minister -ST Somashekhar -presented – expenditure -account Mysore Dasara
ENGLISH SUMMARY…
Minister S.T. Somashekar presents Mysuru Dasara Mahotsav expenditure details
Mysuru, November 1, 2022 (www.justkannada.in): The historic Mysuru Dasara and Jamboo Savari programs were conducted in a grand manner this year by the State Government. Mysuru District Incharge Minister S.T. Somashekar today presented the details of expenditure of the Mysuru Dasara program after nearly one month after the celebrations.
A total sum of Rs. 31,08,88,819 were mobilized for the Mysuru Dasara celebrations 2022, including Rs. 10 crore from MUDA, Rs. 15 crore from the Kannada and Culture Department, Rs. 5 crore from the Palace Administration Board, Rs. 32.50 lakh through sponsorships, Rs.76 lakh from sale of tickets and gold cards.
A total sum of Rs. 26,54,49,058 were spend for the Dasara Mahotsav this year. A sum of Rs. 2.20 crore was spent for the Dasara celebrations held at Mandya, Chamarajanagara and Hassan. The total amount spent for this year’s Dasara mahotsav is Rs.28,74,49,058. A sum of Rs. 2,34,39,761 is remaining, as revealed by the Minister. He also instructed the district officers to scrutinize with guidance from the Deputy Commissioner.
Keywords: Mysuru District Incharge Minister/ S.T. Somashekar/ Mysuru Dasara Mahotsav/ expenditure/ details