ಮೈಸೂರು,ಫೆಬ್ರವರಿ,8,2021(www.justkannada.in): ಸಿಎಂ ಯಡಿಯೂರಪ್ಪ ಸರ್ಕಾರ ಡಕೋಟ ಎಕ್ಸ್ ಪ್ರೆಸ್ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಅವರದ್ದೇ ಒಂದು ಡಕೋಟ. ವಿರೋಧ ಪಕ್ಷದವರು ನಮ್ಮದು ಜನಪ್ರಿಯ ಸರ್ಕಾರ ಅಂತಾ ಹೇಳ್ತಾರಾ ? ಅವರೇ ವಿರೋಧ ಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲೆಗಳಿಗೆ ಪ್ರವಾಸಕ್ಕೂ ಹೋಗುತ್ತಿಲ್ಲ. ಅವರು ಮಾಡುವ ಕೆಲಸ ಮಾಡದೇ ಸುಮ್ಮನೆ ಈ ರೀತಿ ಹೇಳುತ್ತಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಸಮರ್ಥವಾಗಿ ಉತ್ತರ ನೀಡಿದ್ದಾರೆ ಎಂದು ಟಾಂಗ್ ಕೊಟ್ಟರು.
ಯಾವ ರಾಜಕಾರಣಿ ಬೇಲ್ ನಲ್ಲಿ ಇಲ್ಲ ಹೇಳಿ.. ?
ಸಿಎಂ ಯಡಿಯೂರಪ್ಪ ಬೇಲ್ ಪಡೆದು ಸಿಎಂ ಆಗಿದ್ದಾರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಯಾವ ರಾಜಕಾರಣಿ ಬೇಲ್‌ನಲ್ಲಿ ಇಲ್ಲ ಹೇಳಿ ? ರಾಜಕಾರಣಿಗಳು ವೈಯಕ್ತಿಕ ವಿಚಾರ ಎಷ್ಟೊಂದಿದೆ. ಸಿಎಂ ಬಿಎಸ್ ಯಡಿಯೂರಪ್ಪ ಕೋವಿಡ್ ಸಮಯದಲ್ಲಿ 24/7 ಕೆಲಸ ಮಾಡಿದ್ದಾರೆ. ಕೊರೋನಾ ಹಿನ್ನೆಲೆ ಆರ್ಥಿಕವಾಗಿ ಹಿನ್ನೆಡೆಯಾಗಿ ಅಭಿವೃದ್ದಿ ಕುಂಠಿತವಾಗಿತ್ತು. ಈಗ ಎಲ್ಲವೂ ಸರಿಯಾಗಿದೆ ಎಂದರು.
ಶಾಸಕ ಯತ್ನಾಳ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ.
ಸಿಎಂ ಯಡಿಯೂರಪ್ಪ ಅವರ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಶಾಸಕ ಯತ್ನಾಳ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಅವರಿಗೆ ಮಾತನಾಡುವ ಚಟ ಇದೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ಅಧ್ಯಕ್ಷರು ಕೇಂದ್ರದ ನಾಯಕರಿಗೆ ಮಾಹಿತಿ ನೀಡಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳೋಬೇಕೋ ಅದನ್ನು ಮಾಡುತ್ತಾರೆ. ಅವರು ಹೇಳಿದ್ದು ಇದುವರೆಗೂ ಏನು ಆಗಿಲ್ಲ. ಅವರು ನಾನು ಇದ್ದೀನಿ ಅಂತಾ ತೋರಿಸಿಕೊಳ್ಳಲು ಹೇಳಿಕೆ ನೀಡ್ತಿದ್ದಾರೆ. ಅವರ ಹಿಂದೆ ಯಾರು ಇಲ್ಲ. ಅವರಿಗೆ ಬೆಂಬಲ ಕೊಡುವವರು ಯಾರು ಇಲ್ಲ ಎಂದು ಕುಟುಕಿದರು.
Key words: Minister- ST Somashekhar – Siddaramaiah’s-criticism – Dakota Express -Government.