ಮೈಸೂರಿನಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ.

ಮೈಸೂರು,ಜನವರಿ,3,2022(www.justkannada.in):  15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ನಗರದ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.

ಮೈಸೂರು ಜಿಲ್ಲೆಯಲ್ಲಿ 1.50 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಜ.5ರಂದು 200 ತಂಡ ಮೈಸೂರಿನ ಗ್ರಾಮಾಂತರ ಭಾಗಗಳಿಗೆ ತೆರಳಿ ಶಾಲೆಗಳಲ್ಲೇ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. 15 ದಿನದಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಿರ್ಧರಿಸಿದೆ. ಮಕ್ಕಳು ಭಯಭೀತರಾಗದೆ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಡಿಎಚ್‌ಒ ಡಾ.ಕೆ.ಎಚ್. ಪ್ರಸಾದ್ ಮಾತನಾಡಿ, ಮಕ್ಕಳು ಲಸಿಕೆ ಪಡೆದುಕೊಳ್ಳಲು ಕೋವಿನ್ ವೆಬ್‌ ಸೈಟ್‌ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕೆ ಅಗತ್ಯವಿರುವ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ. ಮೊಬೈಲ್ ತರುವ ಅಗತ್ಯವಿಲ್ಲ. ಕೋವಿಡ್ 19 ಲಸಿಕೆಯ ಬಗ್ಗೆ ಪೋಷಕರು ವದಂತಿಗಳಿಗೆ ಕಿವಿಗೊಡಬಾರದು. 2007ನೇ ಇಸವಿಯಲ್ಲಿ ಜನಿಸಿರುವ ಮಕ್ಕಳು ಮತ್ತು 2007ನೇ ಇಸವಿಗೂ ಮುನ್ನ ಜನಿಸಿರುವ ಮಕ್ಕಳು, ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಪೋಷಕರು ಸ್ವಯಂ ಪ್ರೇರಿತವಾಗಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕೆ ಪಡೆದುಕೊಳ್ಳುವಂತೆ ತಿಳಿದುಕೊಳ್ಳಬೇಕು. 44 ಲಕ್ಷ ಜನರಿಗೆ ಲಸಿಕೆ: ಜಿಲ್ಲೆಯಲ್ಲಿ ಇದುವರೆಗೆ 44.50 ಲಕ್ಷ ಜನರಿಗೆ ಕೋವಿಡ್ ಲಸಿಕಾ ಡೋಸ್‌ ಗಳನ್ನು ನೀಡಿ ರಾಜ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿದರು. ಮೇಯರ್ ಸುನಂದಾ ಪಾಲನೇತ್ರ, ಡಿಸಿ ಬಗಾದಿ ಗೌತಮ್, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಸೇರಿದಂತೆ ಇತರರು ಇದ್ದರು.

Key words: Minister -ST Somashekhar- vaccine -program – children – Mysore

ENGLISH SUMMARY…

Minister S.T. Somashekar launches COVID vaccination drive for 15-18 year old children in Mysuru
Mysuru, January 3, 2022 (www.justkannada.in): Mysuru District In-charge Minister S.T. Somashekar today, launched the COVID vaccination drive for children aged between 15-18 years at the Maharani Women’s College.
In his address, he informed that the government aims to administer COVID vaccination to 1.50 lakh children in Mysuru District. “Two hundred teams will visit rural areas in the district on January 5 and administer the vaccines to the children at schools. The District Administration, Mysuru City Corporation, and Health Departments have set an aim to cover all the children within the next 15 days. I request all the children to take the vaccine without fear,” he said.
MLA L. Nagendra, Mayor Sunanda Palanetra, Deputy Commissioner Bagadi Gowtham, MCC Commissioner Lakshmikantareddy, and others were present.
Keywords: COVID vaccination drive/ 15- 18 years/ launched/ Mysuru