ಬೆಂಗಳೂರು,ಜನವರಿ,25,2023(www.justkannada.in): ಕೊರೋನಾ ವೇಳೆ ಸಚಿವ ಸುಧಾಕರ್ 3 ಸಾವಿರ ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸಚಿವ ಸುಧಾಕರ್ ಗೆ ರಾಜಕೀಯ ಜೀವನ ನೀಡಿದ್ದು ಕಾಂಗ್ರೆಸ್. ಆದರೆ ಹಣದ ಆಸೆಗೆ ಬಿಜೆಪಿ ಸೇರಿದ್ರು. ಕೊರೊನಾ ವೇಳೆ 3 ಸಾವಿರ ಕೋಟಿ ಲಂಚ ಪಡೆದಿದ್ದಾರೆ. ಈ ಬಿಜೆಪಿ ಸರ್ಕಾರ ಕೊರೋನಾ ಸಮಯದಲ್ಲೂ ಭ್ರಷ್ಟಾಚಾರ ಮಾಡಿದೆ. ಆರೋಗ್ಯ ಇಲಾಖೆಯಲ್ಲಿ 3ಸಾವಿರ ಕೋಟಿ ಹಗರಣ ಆಗಿರುವ ವರದಿ ಇದೆ ಎಂದು ಕಿಡಿಕಾರಿದರು.
ಬಿಜೆಪಿ ಒಂದು ಸಂಚು ರೂಪಿಸಿದೆ. ಜೆಪಿ ನಡ್ಡಾ, ಕಟೀಲ್, ಸಿಎಂ ಬೊಮ್ಮಾಯಿ, ರಮೇಶ್ ಜಾರಕಿಹೋಳಿ ಸೇರಿ ಸಂಚು ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಯ ಬಿಜೆಪಿಗೆ ಬಂದಿದ್ದು, ಮತ್ತೆ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ. 40% ಸರ್ಕಾರ ಇದು, ಎಲ್ಲದರಲ್ಲಿ ದುಡ್ಡು ಹೊಡೆದಿದ್ದಾರೆ. ಎಲ್ಲಾ ಕಚೇರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಆಹಣದಲ್ಲಿ 30 ಸಾವಿರ ಕೋಟಿ ಈ ಚುನಾವಣೆಯಲ್ಲಿ ಬಿಜೆಪಿ ಖರ್ಚು ಮಾಡುತ್ತೆ. 5 ಕೋಟಿ ಮತದಾರರಿಗೆ ದುಡ್ಡು ನೀಡಲು ಹೊರಟಿದ್ದಾರೆ. ಇದು ನಾನು ಹೇಳಿಲ್ಲ ರಮೇಶ್ ಜಾರಕಿಹೋಳಿ ಹೇಳಿದ್ದಾರೆ. ಸ್ವತಂತ್ರವಾಗಿ ಚುನಾವಣೆ ನಡೆಯಬೇಕು. ಈ ರೀತಿಯಲ್ಲಿ ಆಮಿಷ ಒಡ್ಡಿದ್ರೆ ಸ್ವತಂತ್ರವಾಗಿ ಚುನಾವಣೆ ನಡೆಯಲ್ಲ. ಪ್ರಜಾಪ್ರಭುತ್ವ ಉಳಿಯಲ್ಲ. ನಮ್ಮೆಲ್ಲರ ಕರ್ತವ್ಯ ಇದೇ ಸ್ವತಂತ್ರ ಚುನಾವಣೆ ಆಗಬೇಕು. ಆಸೆ ಆಮಿಷ ಒಡ್ಡುವುದು ಕಾನೂನು ಬಾಹಿರ ಎಂದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಚುನಾವಣಾ ಆಯೋಗಕ್ಕೆ ಆ ಮೇಲೆ ದೂರು ಕೊಡ್ತೆವೆ. ಈಗ ಪೊಲೀಸ್ ಗೆ ದೂರು ನೀಡಿದ್ದೇವೆ. ಎಫ್ ಐಆರ್ ಹಾಕಲು ಮನವಿ ಮಾಡಿದ್ದೇವೆ ಎಂದು ಸಿದ್ಧರಾಮಯ್ಯ ಹೇಳಿದರು.
Key words: Minister –Sudhakar- 3 thousand crore- rupees-bribe- Former CM- Siddaramaiah