ಮೈಸೂರು,ಆ,30,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಿಲ್ಲಾಡಳಿತ ಸಿದ್ದತೆ ನಡೆಸುತ್ತಿದೆ. ಈ ಸಂಬಂಧ ವಿಶ್ವ ಮಾನ್ಯತೆ ಹೊಂದಿರುವ ದಸರಾ ಯಶಸ್ವಿ ಆಗಬೇಕು. ಹೀಗಾಗಿ ಚಳಿ ಬಿಟ್ಟು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಬೆಳ್ಳಂಬೆಳಿಗ್ಗೆ ಅಧಿಕಾರಿಗಳ ಚಳಿ ಬಿಡಿಸಿದ ಉಸ್ತುವಾರಿ ಸಚಿವ ವಿ ಸೋಮಣ್ಣ, ಚಾಮುಂಡಿ ಬೆಟ್ಟದ ಅಂಗಡಿಗಳ ತೆರವುಗೊಳಿಸುವಂತೆ ಸೂಚನೆ ನೀಡಿದರು. ಮಲ್ಟಿಪಲ್ ಪಾರ್ಕಿಂಗ್ ಇನ್ನ 20 ದಿನದಲ್ಲಿ ಕಂಪ್ಲೀಟ್ ಮಾಡಿ. ವಿಶ್ವ ಮಾನ್ಯತೆ ಹೊಂದಿರುವ ದಸರಾ ಯಶಸ್ವಿ ಆಗಬೇಕು. ಯಾರ ಮುಲಾಜಿಗೂ ಒಳಗಾಗ ಬೇಡಿ. ಜಿಟಿ ದೇವೇಗೌಡರ ಸಲಹೆ ಪಡೆದು ಕೆಲಸ ಮಾಡಿ. ಬೆಟ್ಟಕ್ಕೆ ಬರುವ ಭಕ್ತರಿಗೆ ಸೂಕ್ತ ದರ್ಶನ, ಪ್ರಸಾದದ ವ್ಯವಸ್ಥೆ ಮಾಡಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸೂಚಿಸಿದರು.
ಮೈಸೂರು ದಸರಾ ವೇಳೆಯಲ್ಲಿ ಮಾಜಿ ಸಚಿವ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಮತ್ತು ಸಚಿವ ಸೋಮಣ್ಣ ಜೋಡೆತ್ತಿನ ರೀತಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ದಾರೆ.
Key words: Minister -V Somanna-officials – Notice -Chamundi Hill- Shops