ಚಾಮರಾಜನಗರ,ಏಪ್ರಿಲ್,1,2025 (www.justkannada.in): ಹಾಲು ಮತ್ತು ಮೊಸರಿನ ದರವನ್ನ 4 ರೂಪಾಯಿ ಹೆಚ್ಚಳ ಮಾಡಲಾಗಿದ್ದು ಇದನ್ನ ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ಸಮರ್ಥಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಕೆ. ವೆಂಕಟೇಶ್, ಹಾಲಿನ ದರವನ್ನ 4 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೆಚ್ಚಳ ಮಾಡಿರುವ 4 ರೂ.ವನ್ನು ಸಂಪೂರ್ಣವಾಗಿ ರೈತರಿಗೆ ಕೊಡುತ್ತೇವೆ. ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡಲು ಎಲ್ಲಾ ಹಾಲು ಒಕ್ಕೂಟಗಳಿಗೂ ಸೂಚಿಸಿದ್ದೇವೆ. ಬೆಲೆ ಏರಿಕೆಗೂ ಗ್ಯಾರಂಟಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಹಾಲಿನ ದರ ಏರಿಕೆಗೆ ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ವೆಂಕಟೇಶ್, ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ 103 ರೂಗೆ ಏರಿಸಿದರೂ ಆದರೆ ಯಾರು ಕೇಳಲಿಲ್ಲ. ರೈತರಿಗೆ ಅನುಕೂಲ ಮಾಡಲು ಹಾಲಿನ ದರ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
Key words: Milk, price hike, Minister, Venkatesh