ಬಳ್ಳಾರಿ,ಫೆಬ್ರವರಿ,26,2025 (www.justkannada.in): ಸಿಎಂ ಬದಲಾವಣೆ ಎಂದವರಿಗೆ ಟಾಂಗ್ ಕೊಟ್ಟಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಸಿದ್ದರಾಮಯ್ಯ ಬೆಂಕಿ ಇದ್ದಂತೆ. ಮುಟ್ಟಲು ಆಗಲ್ಲ. ಒಂದು ವೇಳೆ ಮುಟ್ಟಿದರೇ ಭಸ್ಮವಾಗುತ್ತಾರೆ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಕುರ್ಚಿ ಮತ್ತು ಕೆಪಿಸಿಸಿ ಅಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಇದ್ದಾರೆ. ಕುರ್ಚಿ ಖಾಲಿ ಇದ್ರೆ ತಾನೇ ಸಿಎಂ ಬದಲಾವಣೆ ಚರ್ಚೆ ಮಾಡೋದು ಎಂದು ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಮುಟ್ಟೋಕೆ ಸಾಧ್ಯನಾ..? ಸಿಎಂ ಬೆಂಕಿ ಇದ್ದಂತೆ. ಯಾರಿಂದಲೂ ಮುಟ್ಟಲು ಆಗಲ್ಲ ಮುಟ್ಟಿದರೇ ಭಸ್ಮವಾಗುತ್ತಾರೆ. ಎಲ್ಲವೂ ಹೈಕಮಾಮಡ್ ನಿರ್ಧಾರಕ್ಕೆ ಬದ್ಧ ಎಂದು ಸಚಿವ ಜಮೀರ್ ತಿಳಿಸಿದರು.
Key words: CM Siddaramaiah, like, fire, Minister, Zameer Ahmed Khan