ಜಾತಿಗಣತಿ ವರದಿ ಸಂಪುಟದಲ್ಲಿ ಚರ್ಚೆಯಾಗಬೇಕು, ಆಗಲಿ-ಸಚಿವ ಜಮೀರ್ ಅಹ್ಮದ್ ಖಾನ್

ಬೆಂಗಳೂರು,ಏಪ್ರಿಲ್,17,2025 (www.justkannada.in):  ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಲು ಇಂದು ಸಚಿವ ಸಂಪುಟ ವಿಶೇಷ ಸಭೆ ಕರೆಯಲಾಗಿದ್ದು, ಜಾತಿಗಣತಿ ವರದಿ ಸಂಪುಟದಲ್ಲಿ ಚರ್ಚೆಯಾಗಬೇಕು, ಆಗಲಿ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ಜಾತಿಗಣತಿ ವರದಿಯ ಪ್ರಕಾರ ಅಲ್ಪಸಂಖ್ಯಾತರ ಸಂಖ್ಯೆ 75 ಲಕ್ಷ.  2011ರಲ್ಲಿ  75 ಲಕ್ಷ ಜನಸಂಖ್ಯೆಯೇ ಇತ್ತು. ಜಾಸ್ತಿ ಏನು ಆಗಲಿಲ್ಲ ಇನ್ನೂ ಅರ್ಧ ಪರ್ಸೆಂಟ್ ಕಡಿಮೆ ಆಗಿದೆ.  ನಂಬರ್ ಒನ್ ಅಲ್ಪಸಂಖ್ಯಾತರು ಇದ್ದಾರೆ ಅಂತಾರೆ ಆದರೆ ಕಡಿಮೆ ಇದೆ. ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.

ವರದಿ ಜಾರಿಯಾದ್ರೆ ಸರ್ಕಾರ ಬೀಳುತ್ತೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್,   ಜಾತಿ ಗಣತಿ ವರದಿ ಬಗ್ಗೆ ಯಾವುದೇ ತೀರ್ಮಾನವೇ ಆಗಿಲ್ಲ. ಇವತ್ತು ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಚರ್ಚೆ ಆಗುತ್ತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಮಾತನಾಡುತ್ತೇನೆ ಎಂದರು.

Key words:  Caste census, report, discussed, cabinet, else, Minister, Zameer Ahmed Khan