ಬೆಂಗಳೂರು,ಸೆಪ್ಟೆಂಬರ್,21,2020(www.justkannada.in) : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅವಿವೇಕಿ ಎಂದಿರುವ ಸಚಿವ ಬಿ.ಸಿ.ಪಾಟೀಲ್ ಅಜ್ಞಾನಿ, ಅವಿವೇಕಿ ಎಂದು ರೈತ ಮಹಿಳೆ ಮಂಜುಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಬಳಿ ಭೂ ಸುಧಾರಣಾ,ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅವರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಿಮಾನದಲ್ಲಿ ಓಡಾಡುವ ಪ್ರಧಾನಿ ಮೋದಿ ಅವರಿಗೆ ರೈತರ ಕಷ್ಟ ಏನು ಗೊತ್ತು
ರೈತರನ್ನು ಸಚಿವ ಬಿ.ಸಿ.ಪಾಟೀಲ್ ಕ್ಷಮೆಯಾಚಿಸಬೇಕು. ಎಸಿ ರೂಂ ನಲ್ಲಿ ಕುಳಿತು ತಿದ್ದುಪಡಿ ಮಾಡುವುದಲ್ಲ. ರೈತರ ಕಷ್ಟ ಹೆಲಿಕಾಫ್ಟರ್, ವಿಮಾನದಲ್ಲಿ ಓಡಾಡುವ ಪ್ರಧಾನಿ ಮೋದಿ ಅವರಿಗೆ ಏನು ಗೊತ್ತು. ಮನಸ್ಸಿಗೆ ಬಂದ ಹಾಗೇ ತಿದ್ದುಪಡಿ ಮಾಡುವುದಲ್ಲ. ಇದರಿಂದ ರೈತರ ಬದುಕು ಸರ್ವನಾಶವಾಗಲಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ರೈತರನ್ನು ಸರ್ವನಾಶ ಮಾಡುವ ಕಾಯ್ದೆ ಜಾರಿಗೆ ಬಿಡುವುದಿಲ್ಲ
ರೈತರು ನೀಡಿದ ಅನ್ನ ತಿಂದು ಇವರು ಬಾಯಿಗೆ ಬಂದ ಹಾಗೇ ಮಾತನಾಡುತ್ತಾರೆ. ಸಚಿವರಿಗೆ, ಶಾಸಕರಿಗೆ ಏನು ಗೊತ್ತು ರೈತರ ಕಷ್ಟ. ರೈತರನ್ನು ಸರ್ವನಾಶ ಮಾಡುವ ಕಾಯ್ದೆ ಜಾರಿಗೆ ನಾವು ಬಿಡುವುದಿಲ್ಲ. ನಾವು ಎಲ್ಲದಕ್ಕೂ ಸಿದ್ಧವಾಗಿ ಬಂದಿದ್ದೇವೆ ಎಂದರು.
ಕೂಡಲೇ ರೈತ, ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ಹಿಂಪಡೆಯಬೇಕು. ಅನ್ನ ನೀಡುವ ರೈತರೇ ಇಲ್ಲವಾದರೆ, ಇವರು ಏನು ತಿನ್ನುತ್ತಾರೆ. ರೈತರು, ಕೃಷಿ ಭೂಮಿ ನಾಶವಾದರೆ, ರೈತರ ಮಕ್ಕಳು ಉದ್ಯೋಗಕ್ಕಾಗಿ ನಗರ ಪ್ರದೇಶವನ್ನು ಅವಲಂಬಿಸಬೇಕಾಗುತ್ತದೆ ಎಂದು ರೈತ ಮಹಿಳೆ ಮಂಜುಳ ಸರ್ಕಾರದ ವಿರುದ್ದ ಕಿಡಿ ಕಾರಿದರು.
key words ; Minister-B.C.Patel-ignorant-stupid-Peasant-woman-Manjula-outrage