ಮೈಸೂರು,ಜ,25,2020(www.justkannada.in): ಉಪಚುನಾವಣೆಯಲ್ಲಿ ಸೋತವರಿಗೆ ಈ ಹಿಂದೆಯೇ ಉಪ ಚುನಾವಣೆಗೆ ನಿಲ್ಲವುದು ಬೇಡ ಅಂತಾ ಸಿಎಂ ಬಿಎಸ್ ವೈ ಹೇಳಿದ್ರು. ಅದರೂ ಕೆಲವರು ಮುಖ್ಯಮಂತ್ರಿಗಳ ಮಾತು ಕೇಳದೇ ಚುನಾವಣೆ ಗೆ ಸ್ಪರ್ಧೆ ಮಾಡಿದ್ರು. ಹೀಗಾಗಿ ಸೋತವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ಗೆ ಶಾಸಕ ಎಸ್.ಟಿ ಸೋಮಶೇಖರ್ ಪರೋಕ್ಷವಾಗಿ ಚಾಟಿ ಬೀಸಿದರು.
ಸುತ್ತೂರಿನಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಎಸ್,ಟಿ ಸೋಮಶೇಖರ್, ಸೋತವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ. ಇಂತಹವರಿಗೆ ಸಚಿವ ಸ್ಥಾನ ನೀಡಿ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಗೆದ್ದ ಬಳಿಕ ಸಚಿವ ಸಂಪುಟ ವಿಸ್ತರಣೆ ಯಾವಗ ಬೇಕಾದ್ರು ಮಾಡಬಹುದು. ಇತಂಹ ದಿನವೇ ಮಾಡಿ ಅಂತಾ ಹೇಳುವುದು ಸರಿಯಲ್ಲ. ಚುನಾವಣೆ ಸಂಧರ್ಭದಲ್ಲಿ ಗೆದ್ದ ತಕ್ಷಣವೇ ಸಚಿವರು ಆಗ್ತಾರೆ ಅಂತಾ ಹೇಳಿದ್ರು. ಅಂದ್ರೆ ಹೇಳಿದ ತಕ್ಷಣ ಮಾಡಲೇ ಬೇಕೆಂಬುದು ಏನು ಇಲ್ಲ ಎಂದು ಹೇಳಿದರು.
ಹಾಗೆಯೇ ಸೋತವರಿಗೆ ಸಚಿವ ಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ಸೋತವರಿಗೆ ಈ ಹಿಂದೆಯೇ ಚುನಾವಣೆ ಗೆ ನಿಲ್ಲವುದು ಬೇಡ ಎಂದಿದ್ರು. ಅದರೂ ಕೆಲವರು ಮುಖ್ಯಮಂತ್ರಿಗಳ ಮಾತು ಕೇಳದೇ ಚುನಾವಣೆ ಗೆ ಸ್ಪರ್ಧೆ ಮಾಡಿದ್ರು. ಶಂಕರ್ ಮಾತ್ರ ಚುನಾವಣೆ ನಿಲ್ಲದೇ ತಟಸ್ಠ ನಿಲುವು ಅನುಸರಿಸಿದ್ರು. ಅವರಿಗೆ ಮೇ ನಲ್ಲಿ ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡ್ತಾರೆ. ಅದಕ್ಕೆ ಅವರು ಚುನಾವಣೆಗೆ ನಿಲ್ಲದೆ ತಟಸ್ಥ ನಿಲುವು ಅನುಸರಿಸಿದ್ರು. ಆದರೆ ಕೆಲವರು ಸೋಲುವ ಮುನ್ಸೂಚನೆ ಇದ್ರು ಚುನಾವಣೆಗೆ ನಿಂತ್ರು ಎಂದು ಎಂಟಿಬಿ ನಾಗರಾಜ್ ಹಾಗೂ ಹೆಚ್. ವಿಶ್ವನಾಥ್ ಗೆ ಪರೋಕ್ಷವಾಗಿ ಚಾಟೀ ಬೀಸಿದರು.
Key words: Ministerial position-MTB Nagaraj -H.Vishwanath-mysore- MLA- ST Somashekhar