ಬೆಂಗಳೂರು,ಆಗಸ್ಟ್,2,2021(www.justkannada.in): ಕೊಟ್ಟವರಿಗೆ ಪದೇ ಪದೇ ಸಚಿವ ಸ್ಥಾನ ನೀಡೋದು ಬೇಡ. ನಮಗೂ ಕೊಡಿ. ಎಲ್ಲರಿಗೂ ಅವಕಾಶ ಸಿಗಲಿ ಎಂದು ಬಾಗಲಕೋಟೆ ಜಿಲ್ಲೆ ತೆರೆದಾಳ ಶಾಸಕ ಸಿದ್ಧು ಸವದಿ ನುಡಿದರು.
ಸಚಿವ ಸಂಪುಟ ರಚನೆ ಸಂಬಂಧ ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು ಸಂಪುಟ ಸೇರುವವರ ಪಟ್ಟಿ ಇಂದು ಫೈನಲ್ ಆಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಶಾಸಕರು ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸಿದ್ಧು ಸವದಿ, ನಾನು ಹಿರಿಯನಿದ್ದೇನೆ. ಹೀಗಾಗಿ ಸಚಿವ ಸ್ಥಾನ ಕೇಳುತ್ತಿದ್ದೇನೆ. ನಾನು ಮೂಲಕ ಬಿಜೆಪಿಯವ. ಎಲ್ಲಾ ಅರ್ಹತೆ ಇದೆ. ಎಲ್ಲರಿಗೂ ಅವಕಾಶ ಸಿಗಲಿ ಎಂಬುದು ಬಿಟ್ಟು ಬೇರೇನು ಇಲ್ಲ. ನಮ್ಮ ಕ್ಷೇತ್ರದ ಜನರ ಖುಷಿಗಾದರೂ ಸಚಿವ ಸ್ಥಾನ ನೀಡಬೇಕು ಎಂದರು.
ನಾನು ನಿಷ್ಟಾವಂತ ಬಿಜೆಪಿ ಕಾರ್ಯಕರ್ತ. ಕೊನೆ ಉಸಿರುವ ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ. ದೆಹಲಿಗೆ ಹೋಗಿ ಲಾಬಿ ಮಾಡುವುದಿಲ್ಲ. ಒತ್ತಡ ಹಾಕಿ ಸಚಿವಸ್ಥಾನ ಪಡೆಯುವುದಿಲ್ಲ ಎಂದು ಶಾಸಕ ಸಿದ್ಧು ಸವದಿ ತಿಳಿಸಿದರು.
Key words: ministerial -position- teredala-MLA-Siddu savadi