ಮೈಸೂರು, ಜೂ.24, 2019 : ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಪುತ್ರ ನಮಾಶಿ, ಹಿಂದಿ ಸಿನಿಮಾ `ಬ್ಯಾಡ್ ಬಾಯ್ ‘ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಅರಮನೆ ನಗರಿ ಮೈಸೂರಿನಲ್ಲಿ ಬಿರುಸಿನಿಂದ ಸಾಗಿದೆ.
ಚಿತ್ರ ನಿರ್ದೇಶಕ ರಾಜ್ಕುಮಾರ್ ಸಂತೋಷಿ ನಿರ್ದೇಶನದ ಬಹುವೆಚ್ಚದ ಈ ಅದ್ದೂರಿ ಸಿನಿಮಾ ಮೈಸೂರಿನ ಸುಸಜ್ಜಿತ ಬಡಾವಣೆ ಎಂದೇ ಹೆಸರು ಪಡೆದಿರುವ ಆರ್.ಟಿ.ನಗರದ ಸುಂದರ ವಾತಾವರಣದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇದೇ ಮೇ 18 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭಿಸಿದ ತಂಡ ಬಳಿಕ ಮುಂಬೈಗೆ ತೆರಳಬೇಕಾಗಿತ್ತು. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಮೈಸೂರಿನ ಸುಂದರ ವಾತಾವರಣದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸುತ್ತಿದೆ.
ಚಿತ್ರ ನಿರ್ಮಾಪಕ ಸಾಜಿದ್ ಖುರೇಷಿ ಪುತ್ರಿ ಅಮ್ರಿನ್ ಸಹ ‘ ಬ್ಯಾಡ್ ಬಾಯ್ ‘ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಪಡೆಯುತ್ತಿದ್ದು, ಇದೊಂದು ರೊಮ್ಯಾನ್ಟಿಕ್ ಕಾಮಿಡಿ ಸಿನಿಮಾ. ಅಂದಕಾಲತ್ತಿಲೈ ಡಿಸ್ಕೋ ಡ್ಯಾನ್ಸ್ ಖ್ಯಾತಿಯ ನಟ ಮಿಥುನ್ ಚಕ್ರವರ್ತಿಗೂ ಮೈಸೂರಿಗೂ ನಂಟಿದೆ. ಮಿಥುನ್ ಒಡೆತನದ ಹೋಟೆಲ್ ಒಂದು ಮೈಸೂರಲ್ಲಿದೆ.
ಚಿತ್ರ ಕೃಪೆ : ಲೊಕೇಶ್ ಮೊಸಳೆ
Mithun Chakraborty’s youngest son Namashi debut film ‘ BAD-BOY’ shooting taken place at R.T.Nagar Mysore.
Mithun Chakraborty’s youngest son Namashi is preparing for his debut. The young actor is going to make his Bollywood debut with Rajkumar Santoshi’s Bad Boy. Along with Namashi, producer Sajid Qureshi’s daughter Amrin is being launch with the film.
director Rajkumar Santoshi has quietly kicked off the shooting of the film on May 18 in Bangalore.
The producer also revealed that the film will be on the lines of Shahid Kapoor and Ileana D’cruz’s Phata Poster Nikhla Hero and Ajab Prem Ki Ghazab Kahani, featuring Ranbir Kapoor and Katrina Kaif as youngsters connect with this genre.
The film is scheduled to be shot in the next 65 days in Mumbai and Bangalore. After a non-stop schedule in Bangalore the will be shot in Mumbai for a few days. A few songs of the film will be shot abroad. The makers are planning for a Diwali release for the film.