ಮುಸ್ಲೀಮರಿಗೆ 4% ಮೀಸಲಾತಿ ಖಂಡಿಸಿ ಕೋರ್ಟ್ ಮೊರೆ ಹೋಗುತ್ತೇವೆ- ಶಾಸಕ ಅರವಿಂದ ಬೆಲ್ಲದ್

ಬೆಂಗಳೂರು,ಮಾರ್ಚ್,20,2025 (www.justkannada.in): ಗುತ್ತಿಗೆಯಲ್ಲಿ ಮುಸ್ಲೀಮರಿಗೆ  4% ಮೀಸಲಾತಿ ಬಿಲ್ ವಿಧಾನಸಭೆಯಲ್ಲಿ ಮಂಡನೆಯಾದ ಬೆನ್ನಲ್ಲೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಈಗಾಗಲೇ ರಾಜ್ಯಪಾಲರಿಗೆ ಬಿಲ್ ಒಪ್ಪದಂತೆ ಮನವಿ ಮಾಡಿದೆ.

ಈ ಮೀಸಲಾತಿ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಮುಸ್ಲೀಮರಿಗೆ 4% ಮೀಸಲಾತಿ ನೀಡುವುದು ಸರಿಯಲ್ಲ. ಧರ್ಮಾಧಾರಿತ ಮೀಸಲಾತಿ ಅಗತ್ಯವಿಲ್ಲ.  ಕಾಂಗ್ರೆಸ್ ನಿಂದ  ಓಲೈಕೆ ರಾಜಕಾರಣ ನಡೆಯುತ್ತಿದೆ. ಈ ಸಂಬಂಧ ಬಿಜೆಪಿ ಸದನದ ಒಳಗೆ ಹೊರಗೆ  ಹೋರಾಟ ಮಾಡುತ್ತೇವೆ. ಮೀಸಲು ಖಂಡಿಸಿ ಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ.

Key words: condemn, 4% reservation, Muslims, MLA, Arvind Bellad