ಜನ ಬೆಂಬಲ ಇರುವವರಿಗೆ ಟಿಕೆಟ್: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿ- ಶಾಸಕ ಗಣಿಗ ರವಿಕುಮಾರ್

ಮಂಡ್ಯ,ಮಾರ್ಚ್,26,2025 (www.justkannada.in): ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಬೇಕು. ಜನ ಬೆಂಬಲ ಇರುವವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಕಾರ್ಯರ್ತರಿಗೆ ಕರೆ ನೀಡಿದರು.

ಇಂದು ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಗಣಿಗ ರವಿಕುಮಾರ್ ,  ಸ್ಥಳೀಯ ಮಟ್ಟದಲ್ಲಿ ಅಧಿಕಾರ ಕೊಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಹ ಆ್ಯಕ್ಟೀವ್ ಆಗಬೇಕು. ನಮಗೆ ಅಧಿಕಾರ ಕೊಡಲು ನೀವು ಶ್ರಮ ಪಟ್ಟಿದ್ದಿರಿ. ನಿಮಗೆ ಈಗ ಅಧಿಕಾರ ಸಿಗಬೇಕು. ಕಳೆದ ಎಂಪಿ ಚುನಾವಣೆಯಲ್ಲಿ ಸೋತಿದ್ದವು. ಇದೀಗ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಬೇಕು ಎಂದರು.

ಮಂಡ್ಯ ನಗರಸಭೆಯಲ್ಲಿ ಒಂದು ಮತದಿಂದ ಸೋತಿದ್ದೇವೆ. ಕುಮಾರಸ್ವಾಮಿ ಅವರು ಪ್ರತಿಷ್ಠೆಗೆ ತೆಗೆದುಕೊಂಡರು. ನೀವು ಅಷ್ಟೆ ನಿರ್ಲಕ್ಷ್ಯ ಮಾಡಬಾರದು. ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ನಿಮಗೆ ಟಿಕೆಟ್ ಸಿಗುತ್ತದೆ, ನ್ಯಾಯ ಸಮ್ಮತವಾಗಿ ಸಿಗುತ್ತದೆ. ಪ್ರತಿ ಗ್ರಾಮದಲ್ಲಿ ಮಾತನಾಡಿ ಪಾರ್ಟಿಗೆ ಸೇರ್ಪಡೆ ಮಾಡಿ ಪಕ್ಷ ಬಲಪಡಿಸುವ ಕಲಸ ಮಾಡಿ. ಜಿ.ಪಂ. ತಾಲ್ಲೂಕು ಪಂಚಾಯತ ಚುನಾವಣೆ ಗೆಲ್ಲಬೇಕು. ಕಾರ್ಯಗತಗೊಳಿಸಲು ನೀವೇಲ್ಲರು ಶ್ರಮ ಪಡಬೇಕು. ಜನ ಬೆಂಬಲ ಇರುವವರಿಗೆ ಟಿಕೆಟ್, ಇಲ್ಲದಿದ್ದರೆ ಟಿಕೆಟ್ ಇಲ್ಲ ಎಂದು ತಿಳಿಸಿದರು.

Key words: ready, for ,Local bodies, election, MLA ,Ganiga Ravikumar