ಮೈಸೂರು,ಜುಲೈ,27,2021(www.justkannada.in): ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆತಂಕ ಮತ್ತು ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಈ ಸಮಯದಲ್ಲೇ ಬಿಜೆಪಿ ಹೈಕಮಾಂಡ್ ರಾಜ್ಯದ ಸಿಎಂ ಬದಲಾವಣೆಗೆ ಮುಂದಾಗಿರುವ ನಡೆಗೆ ಹಲವು ಟೀಕೆಗಳು ವ್ಯಕ್ತವಾಗಿದೆ.
ಈ ಮಧ್ಯೆ ತುರ್ತಾಗಿ ಸಿಎಂ ಮತ್ತು ಕ್ಯಾಬಿನೆಟ್ ರಚನೆ ಮಾಡುವಂತೆ ಬಿಜೆಪಿ ಹೈಕಮಾಂಡ್ ಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಒತ್ತಾಯ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಶಾಸಕ ಜಿಟಿ ದೇವೇಗೌಡ, ಸಿಎಂ ಬದಲಾವಣೆಗೆ ಇದು ಸೂಕ್ತ ಸಮಯ ಆಗಿರಲಿಲ್ಲ. ಆದರೂ ಕೂಡ ಬಿಜೆಪಿ ಹೈಕಮಾಂಡ್ ಬದಲಾವಣೆ ಮಾಡಲು ಹೋಗಿದೆ. ಒಂದು ಕಡೆ ಕೋರೋನಾ ಮೂರನೇ ಅಲೆ ಬರುತ್ತಿದೆ. ಮತ್ತೊಂದೆಡೆ ಉತ್ತರ ಕನ್ನಡ ಭಾಗದಲ್ಲಿ ಪ್ರವಾಹ ಬಂದಿದೆ. ಆದಷ್ಟು ಬೇಗ ಸಿಎಂ ಮತ್ತು ಮಂತ್ರಿಮಂಡಲ ರಚನೆಯಾಗಬೇಕು. ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ತುರ್ತಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರು ಭಾಗಕ್ಕೆ ಮಂತ್ರಿಗಿರಿ ಸಿಗಲಿ. ಈ ಹಿಂದೆ 3-4 ಮಂದಿ ಮೈಸೂರು ಭಾಗದಲ್ಲಿ ಸಚಿವರಾಗುತ್ತಿದ್ದೇವು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿರುವ ಶಾಸಕ ಜಿ.ಟಿ ದೇವೇಗೌಡ, ಯಡಿಯೂರಪ್ಪನವರು ವಿರಾಮಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರು ಸಕ್ರೀಯ ರಾಜಕಾರಣದಲ್ಲಿ ಇರುತ್ತಾರೆ ಎಂದು ನಾನು ಭಾವಿಸಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಗೆ ಏನಾಗಾತ್ತೋ ನೋಡೋಣ ಎಂದರು.
Key words: MLA- GT Deve Gowda- urges – CM -Cabinet -formation.