ಜಿಟಿಡಿ ನೇತೃತ್ವದಲ್ಲಿ ವಿಧಾನಪರಿಷತ್ ಚುನಾವಣೆ: ಅವರ ಕುಟುಂಬದ ಸದಸ್ಯರೂ ಅಭ್ಯರ್ಥಿ ಆಗಬಹುದು- ಸಾ.ರಾ ಮಹೇಶ್ ಅಚ್ಚರಿ ಹೇಳಿಕೆ.

ಮೈಸೂರು,ನವೆಂಬರ್,13,2021(www.justkannada.in):  ಈಗಾಗಲೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿರುವ ಶಾಸಕ ಜಿ.ಟಿ ದೇವೇಗೌಡರ ಬಗ್ಗೆ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು ಮುಂಬರುವ ವಿಧಾನ ಪರಿಷತ್ ಚುನಾವಣೆಯನ್ನು ಶಾಸಕ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಎದುರಿಸುತ್ತೇವೆ. ಅವರ ಕುಟುಂಬ ಸದಸ್ಯರೊಬ್ಬರು ಅಭ್ಯರ್ಥಿ ಆದರೂ ಆಗಬಹುದು ಎಂದು ಶಾಸಕ ಸಾ.ರಾ ಮಹೇಶ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ ಮಹೇಶ್, ವಿಧಾನ ಪರಿಷತ್ ಚುನಾವಣೆಯನ್ನು ಶಾಸಕ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಎದುರಿಸುತ್ತೇವೆ. ಈ ಸಂಬಂಧ ಸದ್ಯದಲ್ಲೇ ಸಭೆ ಕರೆಯಲಾಗುವುದು. ಅವರು ನಮ್ಮ ಪಾರ್ಟಿ ಶಾಸಕರು. ಅವರದ್ದು ಓಟ್ ಇದೆ.  ಹಾಗಾಗಿ ಅವರೇ ಮುಂದೆ ನಿಂತು ಚುನಾವಣೆ ನಡೆಸುತ್ತಾರೆ. ನಮ್ಮಲ್ಲಿ ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ ಎಂದರು.How - expect -development - minister –MLA- SARA Mahesh- mysore

ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದ ಶಾಸಕ ಜಿ ಟಿ ದೇವೇಗೌಡರ ಕುಟುಂಬದವರೇ ಅಚ್ಚರಿಯ ಅಭ್ಯರ್ಥಿ ಆಗಬಹುದು. ನಮ್ಮ ಪಕ್ಷದ ಬಲವರ್ಧನೆಗೆ ಅವರ ಕುಟುಂಬ ಸದಸ್ಯರು ಸಾಕಷ್ಟು ಶ್ರಮಿಸಿದ್ದಾರೆ. ಹಾಗಾಗಿ ಅವರ ಕುಟುಂಬ ಸದಸ್ಯರೊಬ್ಬರು ಅಭ್ಯರ್ಥಿ ಆದರೂ ಆಗಬಹುದು ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಎಂಎಲ್ಸಿ ಸಂದೇಶ್ ನಾಗರಾಜ್ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಸಂದೇಶ್ ನಾಗರಾಜ್ ಅವರು ಯಾವತ್ತು ಚುನಾವಣೆ ಆಯಿತೋ ಅಂದಿನಿಂದಲೂ ನಮ್ಮ ಜೊತೆ ಎಲ್ಲಿದ್ದಾರೆ. ಅವರು ನಮ್ಮ ಜೊತೆ ಗುರುತಿಸಿಕೊಂಡಿಲ್ಲ. ಈಗ ಆ ವಿಚಾರ ಅಪ್ರಸ್ತುತ. ಸಂದೇಶ್ ನಾಗರಾಜ್ ರಿಂದ ತೆರವಾಗುವ ಸ್ಥಾನಕ್ಕೆ ಎದುರಾಗಿರುವ ಚುನಾವಣೆಗೆ ಸಜ್ಜಾಗಿದ್ದೇವೆ. ನಮ್ಮ ಪಕ್ಷದಲ್ಲಿ ಐದು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಡೆಗೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಬಹುದು. ನಮ್ಮ ಪಕ್ಷದ ಜನಪ್ರತಿನಿಧಿಗಳು ಮೈಸೂರು ಜಿಲ್ಲೆಯಲ್ಲಿ ಹೆಚ್ಚಿರುವುದರಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ಬಿಟ್ ಕಾಯಿನ್ ಅಂದರೇನೆಂದು ಗೊತ್ತಾಗಿದ್ದೇ 15 ದಿನದ ಹಿಂದೆ. ನನಗೆ ಬಿಟ್ ಕಾಯಿನ್ ಗೊತ್ತಿಲ್ಲ‌. ಅದರ ಬೆಲೆಯೂ ಗೊತ್ತಿಲ್ಲ. ಜನರಿಗೆ ವೈಟ್ ಮನಿ, ಬ್ಲಾಕ್ ಮನಿ ಗೊತ್ತಿತ್ತು.  ಆದರೆ ಬಿಟ್ ಮನಿ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ ಎಂದರು.

Key words:  mla-GT devegowda-legislative council-election-candidate- SA RA Mahesh

ENGLISH SUMMARY…

We will face MLC elections under the leadership of GTD: Sa.Ra. Mahesh
Mysuru, November 13, 2021 (www.justkannada.in): JDS MLA Sa. Ra. Mahesh today gave a surprising statement on MLA G.T. Devegowda, who has disclosed his resignation from JDDS and joining the Congress party.
MLA Sa. Ra. Mahesh today surprised everybody by announcing that the JDS would face the MLC elections under the leadership of G.T. Devegowda, and any of his family members can also become the candidate.How - expect -development - minister –MLA- SARA Mahesh- mysore
Addressing a press meet in Mysuru today, Sa. Ra. Mahesh informed that the JDS would face the MLC elections under the leadership of MLA G.T. Devegowda. “A meeting will be held regarding this very soon. He is an MLA from our party. He also possesses a vote. Hence he will only lead the elections. There are four ticket aspirants in our party,” he said.
Further, he also informed that any family member of G.T. Devegowda can also become the candidate. “His family members have strived to strengthen our party. Hence, any member of his family may also become the candidate.”
Keywords: Sa. Ra. Mahesh/ MLC election/ G.T. Devewowda