ಶಾಸಕ ಜಿಟಿಡಿ ಹೇಳಿಕೆ ಉಲ್ಲೇಖಿಸಿ ಕೇಂದ್ರ ಸಚಿವ ಹೆಚ್.ಡಿಕೆಗೆ ಟಾಂಗ್ ಕೊಟ್ಟ ಸಚಿವ ಚಲುವರಾಯಸ್ವಾಮಿ

ಮಂಡ್ಯ, ಅಕ್ಟೋಬರ್,4,2024 (www.justkannada.in): ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಸುಮ್ಮನೇ ರಾಜೀನಾಮೆ ಕೇಳಲಾಗಲ್ಲ ಎಂಬ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರ ಹೇಳಿಕೆ ಉಲ್ಲೇಖಿಸಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಈ ಬಗ್ಗೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸಿದ್ದರಾಮಯ್ಯ  ಪರ ವಿಪಕ್ಷಗಳ ನಾಯಕರೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, 136 ಶಾಸಕರು ಸಿಎಂ ಪರವಿದ್ದೇವೆ.  ಸುಮ್ಮನೆ ರಾಜೀನಾಮೆ ಕೇಳಲಾಗಲ್ಲ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡರು ಹೇಳಿದ್ರು. ಈಗಲಾದರೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಗೆ ಅರ್ಥ ಆಗಿದೆ ಅನ್ನಿಸುತ್ತೆ. ಯಾರ ವಿರುದ್ದ ಎಫ್ ಐಆರ್ ಆಗಿದೆಯೂ ಅವರು  ಅರ್ಥಮಾಡಿಕೊಳ್ಳಲಿ ಎಂದು ಕಾಲೆಳೆದರು.

ಸಿಎಂ ಆಗಿ ಮುಂದುವರೆಯುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ.  ಅಧಿಕಾರದ ಹಂಚಿಕೆ ವಿಚಾರದ ಬಗ್ಗೆ ಚರ್ಚಿಯಿಲ್ಲ. ಸಿಎಂ ಬದಲವಾಣೆ ಬಗ್ಗೆ ಚರ್ಚೆಯಾಗಿಲ್ಲ.  ಆರ್  ಅಶೋಕ್  ಕೇಸ್ ಗೂ, ಸಿಎಂ ಸಿದ್ದರಾಮಯ್ಯ ಕೇಸ್ ಗೂ  ವ್ಯತ್ಯಸವಿದೆ. ನಮ್ಮ ನಾಯಕರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಾರೆ ಎಂದರು.

ಚನ್ನಪಟ್ಟಣ ಎಲೆಕ್ಷನ್ ಗೆ ಹಣಕ್ಕೆ ಬೇಡಿಕೆ ಸಂಬಂಧ ಎಫ್ ಐಆರ್ ಆಗಿದೆ. ತನಿಖೆ ನಡೆಯಲಿದೆ.  ಗೊತ್ತಿಲ್ಲದೇ ಮಾತನಾಡಲು ನಾನು ಹೆಚ್ ಡಿಕೆ ಅಲ್ಲ.  ಹೆಚ್ ಡಿಕೆ ಏನು ಅಂತಾ ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಕೇಂದ್ರ ಸಚಿವ  ಹೆಚ್ ಡಿಕೆ ಉಡಾಫೆ ಮಾತುಗಳನ್ನ ಬಿಡಲಿ. ಜನ ನೀಡಿರುವ ಜವಾಬ್ದಾರಿಯನ್ನ ಹೆಚ್.ಡಿಕೆ ನಿಭಾಯಿಸಲಿ ಎಂದು ಹೇಳಿದರು.

Key words: MLA GT Devegowda, statement, Minister, Chaluvarayaswamy , HDK