ಸಿಪಿವೈ ಅವರನ್ನ ಮಂತ್ರಿ ಮಾಡಲಿ- ನಿಖಿಲ್ ಸೋಲಿನ ಬಗ್ಗೆ ಶಾಸಕ ಹೆಚ್.ಡಿ ರೇವಣ್ಣ ಏನಂದ್ರು?

ಬೆಂಗಳೂರು,ನವೆಂಬರ್,27,2024 (www.justkannada.in):  ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ರೇವಣ್ಣ,  ಅದೇ ಕ್ಷೇತ್ರದ ಜನ ನಿಖಿಲ್ ಕುಮಾರಸ್ವಾಮಿ  ಕೈ ಹಿಡಿಯುತ್ತಾರೆ. ಚನ್ನಪಟ್ಟಣ ಜನ ನಿಖಿಲ್ ಗೆ 85 ಸಾವಿರ ಮತ ನೀಡಿದ್ದಾರೆ. ನಿಖಿಲ್ ಗೆ ಜನರು ಆಶೀರ್ವಾದ ಮಾಡಿದರೇ  ಅವರು ಕೆಲಸ ಮಾಡಿತ್ತಾರೆ  ಚುನಾವಣೆ 15 ದಿನ ಇರುವಾಗ ನಿಖಿಲ್ ಪ್ರಚಾರಕ್ಕೆ ಹೋಗಿದ್ದರು. ಆದರೆ ಯೋಗೇಶ್ವರ್ ಕಳೆದ 6 ತಿಂಗಳಿಂದ ಪ್ರಚಾರ ಮಾಡಿದ್ದರು  ಎಂದರು.

ಕಾಂಗ್ರೆಸ್ ನವರು ಸಿಪಿ ಯೋಗೇಶ್ವರ್ ರನ್ನು ಕೈಕಾಲು ಕಟ್ಟಿ ಕರೆದುಕೊಂಡು ಹೋದರು. ಸಿಪಿವೈಗೆ ಉಜ್ವಲ ಭವಿಷ್ಯ ನೀಡಲಿ. ಸಿಪಿ ಯೋಗೇಶ್ವರ್ ಒಳ್ಳೆಯ ಕೆಲಸ ಮಾಡಲಿ ಅವರನ್ನ ಮಂತ್ರಿ ಮಾಡಲಿ.  ನಿಖಿಲ್ ಗೆ ಭವಿಷ್ಯವಿದೆ ಅವನಿಗೆ ವಯಸ್ಸಾಗಿಲ್ಲ.  ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಯಲಿ ಎಂದು ಹೆಚ್ ಡಿ ರೇವಣ್ಣ ಶುಭಹಾರೈಸಿದರು.

ಚನ್ನಪಟ್ಟಣ ಚುನಾವಣಾ ಪ್ರಚಾರದಿಂದ ಅಂತರ ಕಾಯ್ದುಕೊಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ರೇವಣ್ಣ,  ನಾನು ಅಂತರ  ಕಾಯ್ದುಕೊಂಡಿಲ್ಲ. ಮನೆಯಲ್ಲಿ ಬಿದ್ದು ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

Key words:  MLA, H.D. Revanna, Channapatna, Nikhil, defeat