ಮೈಸೂರು,ಮಾರ್ಚ್,23,2025 (www.justkannada.in): ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಯುಟಿ ಖಾದರ್ ನಡೆಯನ್ನ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಕೆ.ಹರೀಶ್ ಗೌಡ, ನಾನು ಶಾಸಕನಾಗಿ 2 ವರ್ಷಗಳಾಗುತ್ತಿದೆ. ಹಲವು ಕಲಾಪಗಳಲ್ಲಿ ಭಾಗವಹಿಸಿದ್ದೇನೆ. ಇಷ್ಟೊಂದು ರೂಡ್ ಆಗಿ ವರ್ತಿಸಿದವರನ್ನ ನಾನು ನೋಡಿರಲಿಲ್ಲ. ಸಭಾಧ್ಯಕ್ಷರು ಅಂದರೆ ಒಂದು ಗೌರವಯುತ ಸ್ಥಾನ. ಆ ಸ್ಥಾನಕ್ಕೆ ಅಗೌರವ ಬರುವ ಹಾಗೆ ಬಿಜೆಪಿಯವರು ನಡೆದುಕೊಂಡಿರುವುದು ಖಂಡನೀಯ. ಇದೆಲ್ಲವನ್ನ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದೀವಾ ಎನಿಸಿತು. ಇದೊಂದು ಘೋರ ಅಪರಾಧ ಎಂದು ಕಿಡಿಕಾರಿದರು.
ಬಿಜೆಪಿಯವರ ಪುಂಡಾಟಿಕೆ ಹೆಚ್ಚಾಗಿದೆ, ಇವರ ನಡೆ ಸದನದಲ್ಲಿ ಹೇಸಿಗೆ ಹುಟ್ಟಿಸಿದೆ. ಹತಾಶರಾಗಿ ಈ ರೀತಿ ಗುಳ್ಳೆನರಿಗಳಂತೆ ವರ್ತಿಸುತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ವಾಗ್ದಾಳಿ ನಡೆಸಿದರು.
Key words: suspension, MLAs, Speaker, position, MLA, Harish Gowda