ಬೆಂಗಳೂರು,ಅಕ್ಟೋಬರ್,8,2024 (www.justkannada.in): ಸಿಎಂ ಸಿದ್ದರಾಮಯ್ಯರ ಕಾನ್ವೆಗೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ಕಾರು ಚಲಾಯಿಸಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ಸೇರಿದ ರೋವರ್ ಕಾರನ್ನು ಗಂಗಾವತಿ ಸಂಚಾರಿ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಜನಾರ್ಧನರೆಡ್ಡಿ ಅವರ ಕಾರು ಜಪ್ತಿ ಮಾಡಿ ಪೊಲೀಸರು ಗಂಗಾವತಿಗೆ ತಂದಿದ್ದಾರೆ. ಅಕ್ಟೋಬರ್ 5 ರಂದು ಸಿಎಂ ತೆರಳುತ್ತಿದ್ದ ವೇಳೆ ಜನಾರ್ದನ ರೆಡ್ಡಿ ನಿಯಮ ಉಲ್ಲಂಘನೆ ಮಾಡಿದ್ದರು. ರಾಯಚೂರಿನಿಂದ ಜಿಂದಾಲ್ ಏರ್ ಪೋರ್ಟ್ ಗೆ ತೆರಳುತ್ತಿದ್ದ ಸಿಎಂ ಸಿದ್ದರಾಮಯ್ಯರ ಕಾನ್ವೆಗೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ಸಂಚರಿಸಿ ಜನಾರ್ಧನ ರೆಡ್ಡಿ ನಿಯಮ ಉಲ್ಲಂಘಿಸಿದ್ದರು.
ನಿರ್ಬಂಧವಿದ್ದರೂ ಸಹ ನಿಯಮ ಉಲ್ಲಂಘಿಸಿ ಶಾಸಕ ಜನಾರ್ದನ ರೆಡ್ಡಿಯವರಿಗೆ ಸೇರಿದ ಕಾರು ಸಿಎಂ ಬೆಂಗಾವಲು ವಾಹನಗಳ ಎದುರುಗಡೆಯಿಂದ ಚಲಾಯಿಸಿದ್ದು, ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 3 ಕಾರುಗಳ ಮೇಲೆ ಎಫ್ ಐಆರ್ ದಾಖಲಿಸಲಾಗಿತ್ತು. ಸ್ಕಾರ್ಪಿಯೋ ಕಾರು, ಫಾರ್ಚೂನರ್ ಕಾರು ಮತ್ತು ರೇಂಜ್ ರೋವರ್ ಕಾರಿನ ಮೇಲೆ ಎಫ್ ಐಆರ್ ದಾಖಲಾಗತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಜನಾರ್ಧನ ರೆಡ್ಡಿ ಅವರಿಗೆ ಸೇರಿದ ರೇಂಜ್ ರೋವರ್ ಕಾರನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
Key words: MLA, Janardhana Reddy, Range Rover car, seized