ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆದ ಕೊರೊನಾ ವಾರಿಯರ್ಸ್ ಆರೋಗ್ಯ ವಿಚಾರಿಸಿದ ಶಾಸಕ ಎಲ್.ನಾಗೇಂದ್ರ…

ಮೈಸೂರು,ಜನವರಿ,16,2021(www.justkannada.in): ಕೋವಿಡ್‌–19 ಪಿಡುಗಿನ ವಿರುದ್ಧ ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.jk-logo-justkannada-mysore

ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ ದೊರಕಿದ ಬಳಿಕ ಮೈಸೂರು ಜಿಲ್ಲೆಯಲ್ಲಿ ಮೊದಲ ದಿನ 9 ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಯಿತು. ಮೈಸೂರಿನ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಉಪಸ್ಥಿತಿಯಲ್ಲಿ ಮೊದಲಿಗೆ ಸಾಂಕೇತಿಕವಾಗಿ ಮೂವರಿಗೆ ಲಸಿಕೆ ನೀಡಲಾಯಿತು.

ಗ್ರೂಪ್ ಡಿ ನೌಕರರಾದ ಸಂದೇಶ್, ಪಿಕೆಟಿಬಿ ಆಸ್ಪತ್ರೆ ಅಧೀಕ್ಷಕ ಡಾ.ವಿರೂಪಾಕ್ಷ, ವಿವೇಕಾನಂದ ಮೆಮೊರಿಯಲ್ ಆಸ್ಪತ್ರೆಯ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರು ಮೊದಲಿಗೆ ಸಾಂಕೇತಿಕವಾಗಿ ಲಸಿಕೆ ಪಡೆದುಕೊಂಡರು.

ಲಸಿಕೆ ಪಡೆದುಕೊಂಡ ವಿವೇಕಾನಂದ ಮೆಮೊರಿಯಲ್ ಆಸ್ಪತ್ರೆಯ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರು ಮಾತನಾಡಿ, ನಾನು ಒಬ್ಬ ವೈದ್ಯನಾಗಿ ಜನರಿಗೆ ಅರಿವು ಮೂಡಿಸಲು ಇಂದು ಲಸಿಕೆ ಪಡೆದುಕೊಂಡಿದ್ದೇನೆ. ನನಗೆ ಯಾವುದೇ ಅಡ್ಡ ಪರಿಣಾಮ ಬೀರಿಲ್ಲ. ಲಸಿಕೆ ಪಡೆದುಕೊಳ್ಳುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿದ್ದು, ಯಾರೂ ಭಯ ಪಡಬಾರದು. ಇದು ಭಾರತದ ವೈದ್ಯಕೀಯ ವಿಜ್ಞಾನಿಗಳು ಸಿದ್ಧಪಡಿಸಿರುವ ಲಸಿಕೆ ಎಂದು ತಿಳಿಸಿದರು.MLA-L. Nagendra –visits- Kovid vaccination center- Coroner Warriors- health

ಇನ್ನು ಶಾಸಕ ಎಲ್. ನಾಗೇಂದ್ರ. ಮೈಸೂರು ಮೆಡಿಕಲ್ ಕಾಲೇಜಿನ ಟ್ರಾಮ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಲಸಿಕಾ ಕೇಂದ್ರದಲ್ಲಿ ಲಸಿಕಾ ಪ್ರಕ್ರಿಯೆಯನ್ನು ವೀಕ್ಷಿಸಿದ ಶಾಸಕ ನಾಗೇಂದ್ರ,  ಬಳಿಕ ಲಸಿಕೆ ಪಡೆದವರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದರು.

 

Key words: MLA-L. Nagendra –visits- Kovid vaccination center- Coroner Warriors- health