ಬೆಂಗಳೂರು,ಜುಲೈ,27,2023(www.justkannada.in): ಕೆಲ ಸಚಿವರ ವಿರುದ್ಧ ಕಾಂಗ್ರೆಸ್ ನ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭೀವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂಗೆ ಶಾಸಕರು ಪತ್ರ ಬರೆದಿರುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಎರಡು ಬಾರಿ ಶಾಸಕಾಂಗ ಸಭೆ ಮುಂದೂಡಿಕೆ ಆಗಿತ್ತು, ಹಾಗಾಗಿ ಸಿಎಲ್ ಪಿ ಸಭೆ ಕರೆದಿದ್ದಾರೆ. ಇದನ್ನೇ ಬಿಜೆಪಿ ನಾಯಕರು ಫೋಟೋಶಾಪ್ ಮಾಡಿ ಹಾಕಿದ್ದಾರೆ. ಆ ಬಗ್ಗೆ ಕ್ರಿಮಿನಲ್ ಕೇಸ್ ಹಾಕಿ ತನಿಖೆಗೆ ಕೊಡಲಾಗಿದೆ. ಓರ್ವ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅನ್ನೋದು ತಪ್ಪಾ? ಎಂದು ಕಿಡಿಕಾರಿದರು.
ಕಳೆದ ಸರ್ಕಾರದಲ್ಲಿ ಅನುಮತಿ ಇಲ್ಲದೆ ಅನುದಾನ ಮಂಜೂರು ಆಗಿದೆ. ಈಗಾಗಲೇ ಗ್ಯಾರಂಟಿ ಯೋಜನೆ ಜಾರಿಮಾಡಲಾಗಿದ್ದು, ಕಾಮಗಾರಿಗೆ ಈ ವರ್ಷ ತೊಂದರೆ ಆಗಲಿದೆ ಅಂತಾ ಸಿಎಂ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: MLA-letter – CM-Minister- Priyank Kharge