ಬೆಂಗಳೂರು,ಮಾರ್ಚ್,19,2025 (www.justkannada.in): ಕುಸುಮಾರನ್ನ ಎಂಎಲ್ ಎ ಮಾಡಲು ನನ್ನಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್, ಡಿ.ಕೆ ಸುರೇಶ್, ಹನುಮಂತರಾಯ ಕುಸುಮಾರಿಂದ ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ. ನಾಲ್ವರು ಸೇರಿ 6 ತಿಂಗಳಿಂದ ಕೊಲೆ ಸಂಚು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮೊಟ್ಟೆ ಹೊಡೆಯೋದು ನನ್ನ ಕಾರಿಗೆ ಕಲ್ಲು ಹೊಡೆಯೋದು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಹಿಂಸೆ ಕೊಡುತ್ತಾರೆ. ಡಿಕೆ ಶಿವಕುಮಾರ್ ಅವರು ಅವನು ಸತ್ತರೂ ಸರಿ ಗನ್ ಮ್ಯಾನ್ ಕೊಡಬೇಡಿ ಎಂದಿದ್ದಾರೆ. ಹೇಗಿದ್ರೂ ಸಾಯಿಸ್ತಾರೆ. ಹೋರಾಡಿಯೇ ಸಾಯುತ್ತೇನೆ ಎಂದು ಮುನಿರತ್ನ ತಿಳಿಸಿದ್ದಾರೆ.
Key words: conspiracy, murder, MLA, Munirathna, allegations