ಕಲ್ಬುರ್ಗಿ,ಡಿಸೆಂಬರ್,28,2021(www.justkannada.in): ಸರ್ಕಾರ ಮನಸ್ಸಿಗೆ ಬಂದಾಗ ನೈಟ್ ಕರ್ಫ್ಯೂ ಜಾರಿ ಮಾಡುತ್ತಿದೆ. ನೈಟ್ ಕರ್ಫ್ಯೂವಿನಿಂದ ಕೊರೋನಾ ಕಂಟ್ರೋಲ್ ಆಗಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ನೈಟ್ ಕರ್ಫ್ಯೂ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೊರೋನಾದಿಂಧ ಸರ್ಕಾರ ಏನು ಕಲಿತಿಲ್ಲ ಪ್ರಧಾನಿ ಮೋದಿ ಕೊರೋನಾ ಬಗ್ಗೆ ಮಾತಾಡಿದ್ದಾಗ ಕ್ರಮ ಕೈಗೊಂಡಿದ್ದೇವೆ ಅಂತಾ ತೋರಿಸಲು ನೈಟ್ ಕರ್ಫ್ಯೂ ಜಾರಿ ಮಾಡುತ್ತಾರೆ. ನೈಟ್ ಕರ್ಫ್ಯೂವಿನಿಂದ ಕೊರೋನಾ ನಿಯಂತ್ರಣವಾಗಲ್ಲ. ಜನದಟ್ಟಣೆ ತಡೆಯಲು ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.
ನೈಟ್ ಕರ್ಫ್ಯೂನಿಂದ ಏನು ಉಪಯೋಗ ಎಂದು ಸರ್ಕಾರ ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
Key words: MLA-Priyank Kharge- outraged -against -government –enforcing- night curfew