ಬೆಳಗಾವಿ,ಡಿಸೆಂಬರ್,2,2024 (www.justkannada.in): ಬಿಎಸ್ ಯಡಿಯೂರಪ್ಪ ಹುಟ್ಟು ಹೋರಾಟಗಾರ.ಆದರೆ ಪಾಪ ವಿಜಯೇಂದ್ರ ಇನ್ನೂ ಸಣ್ಣ ಹುಡುಗ. ಹೀಗಾಗಿ ರಾಜಾಧ್ಯಕ್ಷ ಸ್ಥಾನ ತ್ಯಾಗ ಮಾಡಿದ್ರೆ ಒಳ್ಳೆಯದು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ಕುರಿತು ಮಾತನಾಡಿದ ರಮೇಶ್ ಜಾರಕಿಹೊಳಿ, ಹೈಕಮಾಂಡ್ ಗೆ ಯಾವ ರೀತಿ ಉತ್ತರ ನೀಡಬೇಕು ನೀಡುತ್ತೇವೆ. ಹೈ ಕಮಾಂಡ್ ಗೆ ಸಮರ್ಥವಾದ ಉತ್ತರ ಕೊಡುತ್ತೇವೆ ಎಂದರು
ಬಿ.ಎಸ್ ಯಡಿಯೂರಪ್ಪ ಹುಟ್ಟು ಹೋರಾಟಗಾರ ಅವರಿಗೆ ಎಲ್ಲವೂ ಗೊತ್ತಿದೆ. ಆದರೆ ವಿಜಯೇಂದ್ರ ಸಣ್ಣ ಹುಡುಗ ಮುಂದೆ ಭವಿಷ್ಯದಲ್ಲಿ ಅವರು ರಾಜ್ಯಾಧ್ಯಕ್ಷ ಆಗಲಿ. ಈಗ ರಾಜ್ಯಾಧ್ಯಕ್ಷ ಸ್ಥಾನ ತ್ಯಾಗ ಮಾಡಿದರೆ ಒಳ್ಳೆಯದು. ಅವನಿಗೆ ರಾಜಕಾರಣ ಗೊತ್ತಿಲ್ಲ. ಎಂದು ಹೇಳಿದರು.
Key words: BY Vijayendra, position, bjp, President, MLA, Ramesh Jarkiholi