ಮೈಸೂರು,ಆ,31,2019(www.justkannada.in): ಮೈಸೂರು ದಸರಾ ಸಿದ್ಧತಾ ಕಾರ್ಯಗಳಿಗೆ ಗೈರಾಗುತ್ತಿದ್ದ ಶಾಸಕ ಎಸ್,ಎ ರಾಮದಾಸ್ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನನಗೆ ಯಾವುದೇ ಅಸಮಾಧಾನ ಇಲ್ಲ. ಅನಾರೋಗ್ಯದ ಕಾರಣಕ್ಕೆ ನಾನು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಮುಂದೆ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆ. ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮ್ದಾಸ್ , ವಿ.ಸೋಮಣ್ಣ ಹಿರಿಯರು. ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಸರವಿಲ್ಲ. ಮುಂದೆ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದರು.
ದಸರಾ ಕಾರ್ಯಕ್ರಮದಲ್ಲಿ ಗೋ.ಮಧುಸೂದನ್ ಭಾಗಿ ವಿಚಾರ ಕುರಿತು ಪ್ರತಿಕ್ರಿಯಿಸಿದ ರಾಮದಾಸ್, ಇದು ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಇದರ ಬಗ್ಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೇ ತೀರ್ಮಾನ ಕೈಗೊಳ್ಳಬೇಕು. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದರು.
ಮೈಸೂರು ದಸರಾದಲ್ಲಿ ಅಥಿತಿಯಾಗಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿದ ಶಾಸಕ ರಾಮದಾಸ್ ಗಜಪಯಣದಲ್ಲಿ ಭಾಗವಹಿಸಿ ಚಾಲನೆ ಕೊಟ್ಟಿದ್ದು ನಾನೇ. ನಿಗದಿತ ಸಮಯದಲ್ಲಿ ಗಜಪಡೆಗೆ ಫಲತಾಂಬೂಲ ಕೊಡಬೇಕಿತ್ತು, ನೀಡಿದ್ದೇನೆ.ಚಾಲನೆಯನ್ನು ನಾನೇ ಕೊಟ್ಟಿದ್ದೇನೆ. ತಾಯಿ ಚಾಮುಂಡೇಶ್ವರಿ ಆಶಿರ್ವಾದ ನನಗೆ ಸಿಕ್ಕಿದೆ. ನಾನು ಮಂಗಳೂರು ಸುಳ್ಯಾದಲ್ಲಿ ಅಪಘಾತವಾಗಿ ವಿಶ್ರಾಂತಿ ಪಡೆದ್ದಿದ್ದೆ. ಆರೋಗ್ಯದ ಸಮಸ್ಯೆಯಿಂದ ಇವತ್ತಿನ ಪಾದಯಾತ್ರೆ ಬರುವುದಿಲ್ಲವೆಂದಿ ತಿಳಿಸಿದ್ದೆ. ವೇಗವಾಗಿ ನಡೆಯಲು ಸಾದ್ಯವಿಲ್ಲ ಎಂದು ತಿಳಿಸಿದ್ದೆ. ದಸರಾ ವೆಬ್ ಸೈಟ್ ಹಾಗೂ ಪೋಸ್ಟರ್ ಬಿಡುಗಡೆಯಲ್ಲಿ ಭಾಗವಹಿಸಿದ್ದೇನೆ. ಮುಂದೆ ಚಾಮುಂಡೇಶ್ವರಿ ಆಶಿರ್ವಾದ ನನಗೆ ಬೇಕಿದೆ ಎಂದರು.
Key words: MLA SA Ramadas- reaction- absent-mysore-Dasara- programs.