ಮೈಸೂರು,ಆಗಸ್ಟ್,30,2021(www.justkannada.in): ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದರೋಡೆ ಮತ್ತು ಶೂಟೌಟ್ ಹಾಗೂ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಗರವನ್ನೆ ಬೆಚ್ಚಿಬೀಳಿಸಿದೆ. ಹೀಗಾಗಿ ಮೈಸೂರಿನಲ್ಲಿ ಕ್ರೈಂ ರೇಟ್ ಹೆಚ್ಚಳ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಸ್,ಎ ರಾಮದಾಸ್, ಶಾಂತಿಯುತವಾಗಿದ್ದ ಮೈಸೂರಿನಲ್ಲಿ ಕ್ರೈಂಗಳು ಹೆಚ್ಚಾಗಿದ್ದು ಬೇಸರದ ಸಂಗತಿ ಎಂದು ಹೇಳಿದ್ದಾರೆ.
ಪೆನ್ಷನರ್ಸ್ ಪ್ಯಾರಡೈಸ್ ಆಗಿರುವ ಮೈಸೂರಿಗೆ ಕಪ್ಪು ಚುಕ್ಕೆ. ಮೈಸೂರಿನಲ್ಲಿ ಪೊಲೀಸರು ಎಚ್ಚರಿಕೆ ವಹಿಸಬೇಕಿತ್ತು. ಗ್ಯಾಂಗ್ ರೇಪ್ ಆರೋಪಿಗಳು ವೆಬುಚಿಯಲ್ ಅಫೆಂಡರ್ಸ್ ಆಗಿರೋದು ಆತಂಕದ ವಿಚಾರ. ನನ್ನ ಕ್ಷೇತ್ರದ ಎಂಟು ಪೊಲೀಸ್ ಠಾಣೆಗಳ ಸಭೆ ನಡೆಸಿದ್ದೇನೆ. ಝೀರೋ ಕ್ರೈ ಸ್ಟೇಷನ್ ಮಾಡಲು ಪಣ ತೊಟ್ಟಿದ್ದೇವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಸೆಪ್ಟಂಬರ್ನಿಂದ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.
ಕಾಂಗ್ರೆಸ್ನವರು ಪ್ರತಿಪಕ್ಷದ ಕೆಲಸ ಮಾಡ್ತಿದ್ದಾರೆ. ಸರ್ಕಾರವನ್ನ ಎಚ್ಚರಿಸುವ ಕೆಲಸ ಮಾಡ್ತಿದ್ದಾರೆ ಎಂದು ರಾಮದಾಸ್ ಹೇಳಿದರು.
ಇನ್ನು ಅರುಣ್ ಸಿಂಗ್ ಪಕ್ಷ ಸಂಘಟನೆಗಾಗಿ ಮೈಸೂರಿಗೆ ಬರುತ್ತಿದ್ದಾರೆ. ನಾನು ಅವರು ನಡೆಸುವ ಸಭೆಯಲ್ಲಿ ಭಾಗವಹಿಸುತ್ತೇನೆ. ಅರುಣ್ ಸಿಂಗ್ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಖುದ್ದು ಸ್ಥಳೀಯ ಮುಖಂಡರಿಂದ ಮಾಹಿತಿಯನ್ನ ಪಡೆಯಲಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
6 ರಿಂದ 8ನೇ ತರಗತಿವರೆಗೂ ಶಾಲೆಗಳನ್ನ ಆರಂಭಿಸಬೇಕು.
ಪ್ರಾಥಮಿಕ ಶಾಲೆ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಸ್.ಎ ರಾಮದಾಸ್, 6 ರಿಂದ 8ನೇ ತರಗತಿವರೆಗೂ ಶಾಲೆಗಳನ್ನ ಆರಂಭಿಸಬೇಕು. ಶಾಲಾ ಮಕ್ಕಳು ಮಾನಸಿಕವಾಗಿ ಡಿಪ್ರೆಷನ್ ಹೋಗಬಾರದು. ಶಾಲೆ ಆಭಿಸುವಂತೆ ಬಹುತೇಕ ಪೋಷಕರ ಒತ್ತಾಯ ಕೂಡ ಇದೆ. ಪೋಷಕರ ಅಭಿಪ್ರಾಯದಂತೆ ಶಾಲೆಗಳನ್ನ ಆರಂಭಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
key words: MLA-SA Ramadas –worried- about -crime rate -hike – Mysore.