ಮೈಸೂರು,ಮೇ,25,2019(www.justkannada.in): ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅಥವಾ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇಬ್ಬರೊಳಗೆ ಯಾರಿಗಾದರೂ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಶ್ರೀನಿವಾಸ್ ಪ್ರಸಾದ್ ಅತ್ಯಂತ ಹಿರಿಯ ಅನುಭವಿ ರಾಜಕಾರಣಿ. ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲೂ ಸಚಿವರಾಗಿ ಕೆಲಸ ಮಾಡಿದ ಅನುಭವಿ. ಅವರು ಗೆದ್ದಿರುವುದು ಸಂತೋಸ ತಂದಿದೆ. ಇನ್ನು ಪ್ರತಾಪ್ ಸಿಂಹ ಡೈನಾಮಿಕ್ ಲೀಡರ್. ಬಿಜೆಪಿ ಎರಡನೇ ಹಂತದ ನಾಯಕರನ್ನ ಬೆಳೆಸುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪಕ್ಷ. ಹೀಗಾಗಿ ಅವರಿಗೂ ಅವಕಾಶ ಸಿಗುವಂತಾಗಲಿ ಎಂದು ಮೈಸೂರು ಕೊಡಗು, ಚಾಮರಾಜನಗರ ಸಂಸದರ ಪರ ಬ್ಯಾಟ್ ಬೀಸಿದರು.
ಮೈಸೂರಿ ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಹಿನ್ನೆಲೆ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಎಸ್.ಎ.ರಾಮದಾಸ್, ಚುನಾವಣೆಗೂ ಮುನ್ನ ಕೆ.ಆರ್ ಕ್ಷೇತ್ರವನ್ನು ಲಕ್ಷಮತಗಳ ಕ್ಷೇತ್ರ ಎಂದು ಸಂಕಲ್ಪ ಮಾಡಿದ್ದೆವು. ಅದರಂತೆ ಕೆ.ಅರ್.ಕ್ಷೇತ್ರದಲ್ಲಿ 1ಲಕ್ಷದ 46ಸಾವಿರ ಮತಗಳು ಚಲಾವಣೆಗೊಂಡಿವೆ.ಇದಕ್ಕೆ ಸಹಕರಿಸಿದ ಕ್ಷೇತ್ರದ ಎಲ್ಲಾ ಜನತೆಗೂ ಧನ್ಯವಾದಗಳು. ಈ ಚುನಾವಣೆಯ ಪ್ರಮುಖ ಪಾತ್ರವಹಿಸಿದ ಫಸ್ಟ್ ಟೈಂ ಓಟರ್ಸ್. ಕೆ.ಆರ್.ಕ್ಷೇತ್ರವನ್ನು ಲಕ್ಷ ಮತದಾರರ ಕ್ಷೇತ್ರವನ್ನಾಗಿಸಲು ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೂ ಧನ್ಯವಾದಗಳು. ಜಾತಿ, ಧರ್ಮ ಎಲ್ಲವನ್ನ ಮೀರಿ ಎಲ್ಲಾ ವರ್ಗದ ಮತ ನೀಡಿದ್ದಾರೆ. ನರೇಂದ್ರ ಮೋದಿಯವರ ಮತ್ತೊಮ್ಮೆ ಪ್ರಧಾನಿ ಮಾಡಲು ಜನ ಉತ್ಸಾಹ ತೋರಿದ್ದಾರೆ. ನನ್ನ ಕ್ಷೇತ್ರದಲ್ಲಿ 107ರ ಅಜ್ಜಿ ಮತ ಚಲಾಯಿಸಿರುವುದು ವಿಶೇಷ ಎಂದು ಸಂತಸ ವ್ಯಕ್ತಪಡಿಸಿದರು.
ಇಂದು ಬಿಜೆಪಿ 303 ಸ್ಥಾನಗಳಿಸಿ ದೇಶದಲ್ಲಿ ಅತ್ಯಧಿಕ ಬಹುಮತಗಳಿಸಿದೆ. ಕರ್ನಾಟಕದ ಇತಿಹಾಸದಲ್ಲಿ 25ಸ್ಥಾನ ಕೊಡುವ ಮೂಲಕ ಜನ ನಮಗೆ ಮತ್ತಷ್ಟು ಜವಾಬ್ದಾರಿ ನೀಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ 2022ರೊಳಗೆ ನರೇಂದ್ರ ಮೋದಿಯವರ ಕನಸಿನ ಕೂಸಾದ ಆಶ್ರಯ ಯೋಜನೆಯಡಿಯಲ್ಲಿ ಸ್ವಂತ ಸೂರನ್ನ ಕಲ್ಪಿಸುವ ನಿರ್ಧಾರಕ್ಕೆ ಕಾರ್ಯೊನ್ಮುಕವಾಗುತ್ತೇವೆ. ಆರೋಗ್ಯ ಮೈಸೂರು ಕಾರ್ಯಕ್ರಮದಿಂದ ಆರೋಗ್ಯ ಭದ್ರತೆ ನೀಡಲು ನಿರ್ಧರಿಸಿದ್ದೇವೆ. ಮತದಾರ ನೀಡಿರುವ ವಿಶ್ವಾಸ, ನಂಬಿಕೆಯನ್ನು ಉಳಿಸುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: MLA SA Ramdas insists that any of them should be placed in the Union Cabinet..
#Mysore #Saramadas #shrinivasprasad #prathapsimha